ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಸಭೆ
ಮಂಗಳೂರು,ಜು.30: ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಿಸಾನ್ ಘಟಕದ ಸಭೆಯು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್‌ರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಸಾಲಮನ್ನಾ ಮಾಡಿದ ಬಳಿಕ ಇದರ ಪ್ರಯೋಜನ ಪಡೆದ ಜಿಲ್ಲೆಯ ರೈತರ ಕುಟುಂಬ ಗಳನ್ನು ಭೇಟಿ ಮಾಡಬೇಕು, ಸರಾಕಾರದ ವಿವಿಧ ಸಾಧನೆಗಳು ಹಾಗೂ ಕೃಷಿಕರಿಗೆ ನೀಡಲಾದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು ಅಧ್ಯಕ್ಷರು ಸೂಚಿಸಿದರು.
ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಉಮಾನಾಥ್ ಶೆಟ್ಟಿ ಸ್ವಾಗತಿಸಿದರು. ಸಭೆಯಲ್ಲಿ ಗೋವರ್ಧನ್, ಅಬ್ದುಲ್ ಖಾದರ್ ಪುತ್ತೂರು, ಗೋಪಾಲ್ ಅಂಚನ್ ಬಂಟ್ವಾಳ, ಶಿವರಾಮ್ ರೈ ಸುಳ್ಯ, ಕರುಣಾಕರ ಶೆಟ್ಟಿ, ನೀರಜ್ ಪಾಲ್, ಅಶೋಕ್ ಚೂಂತಾರು ಸುಳ್ಯ, ಜಯರಾಮ್ ರೈ ಪುತ್ತೂರು, ನವೀನ್ ಚಂದ್ರ ಶೆಟ್ಟಿ ಬಂಟ್ವಾಳ, ನೇಮಿರಾಜ್ ಗೌಡ ಬೆಳ್ತಂಗಡಿ, ಪುರುಷೋತ್ತಮ ಶೆಟ್ಟಿ ಉಳ್ಳಾಲ್, ಅರುಣ್ ಡಿಸೋಜ ಮುಡಿಪು ಮತ್ತಿತರರು ಉಪಸ್ಥಿತರಿದ್ದರು.
ಎಪಿಎಂಸಿ ಸದಸ್ಯ ಭರತೇಶ್ ಅಮೀನ್ ವಂದಿಸಿದರು.
Next Story





