ವೇಣೂರಿನ ಮಹಿಳೆ ಎಚ್ 1 ಎನ್ 1ಗೆ ಬಲಿ

ಬೆಳ್ತಂಗಡಿ, ಜು.30: ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಣಂತಿ ಮಹಿಳೆಯೋರ್ವರು ಎಚ್ 1 ಎನ್ 1ಗೆ ಬಲಿಯಾಗಿದ್ದಾರೆ.
ವೇಣೂರು ಗ್ರಾಪಂನಲ್ಲಿ ಕೆಲಸ ಮಾಡುತ್ತಿದ್ದ, ವೇಣೂರು ನಿವಾಸಿ ಪುಷ್ಪಾವತಿ (27) ಮೃತ ಮಹಿಳೆ. ಇವರು ಮೂರು ವಾರಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗರ್ಭಿಣಿಯಾಗಿದ್ದ ಇವರಿಗೆ ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು ಹೊರತೆಗೆಯಲಾಗಿತ್ತು. ಆದರೆ ಇಂದು ತೀವ್ರ ಅನಾರೋಗ್ಯಕ್ಕೀಡಾಗಿ ಅವರು ಮೃತಪಟ್ಟಿದ್ದಾರೆ.
Next Story





