ಪ್ರತ್ಯೇಕ ವೀರಶೈವ ಧರ್ಮ ತಪ್ಪಲ್ಲ: ಡಾ.ಸಿದ್ದಲಿಂಗಯ್ಯ

ಮಂಡ್ಯ, ಜು.30: ಪ್ರತ್ಯೇಕ ವೀರಶೈವ ಧರ್ಮದ ಬಗ್ಗೆ ದನಿ ಎತ್ತಿರುವುದು ತಪ್ಪಲ್ಲ. ಆದರೆ, ಎಲ್ಲರೂ ಒಂದೆಡೆ ಸೇರಿ ಚರ್ಚಿಸಿ ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯ ಸಲಹೆ ಮಾಡಿದ್ದಾರೆ.
ಮಳವಳ್ಳಿಯಲ್ಲಿ ರವಿವಾರ ಕಾರ್ಯಕ್ರಮಕ್ಕೆ ಭಾಗವಹಿಸಿದ್ದ ವೇಳೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವೀರಶೈವರ ಬಗ್ಗೆ ತನಗೆ ಅಪಾರವಾದ ಗೌರವವಿದೆ. ಬೇಡಿಕೆಗೆ ಸರಕಾರವೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ ಎಂದರು.
ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ಕೇಳುತ್ತಿರುವುದು ಸರಿಯಾಗಿದೆ. ಅದು ನ್ಯಾಯಯುತವಾದುದು. ಈ ಬೇಡಿಕೆಯನ್ನು ತಾನು ಬೆಂಬಲಿಸುತ್ತೇನೆ ಎಂದೂ ಅವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
Next Story





