ಪ್ರೊ.ಯು.ಆರ್.ರಾವ್ ಸಂಸ್ಮರಣೆ -ಶ್ರದ್ಧಾಂಜಲಿ ಸಭೆ

ಉಡುಪಿ, ಜು.30: ಯು.ಆರ್.ರಾವ್ ಅಮೆರಿಕಾಕ್ಕೆ ಹೋದ ಬಳಿಕ ಅವರ ಬುದ್ದಿವಂತಿಕೆ ಹಾಗೂ ಸಾಮರ್ಥ್ಯ ನಮಗೆ ತಿಳಿದದ್ದು. ಅಮೆರಿಕಾದ ಬಾಹ್ಯಾಕಾಶ ಸಂಸ್ಥೆಯಲ್ಲಿ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸಿದರು ಎಂದು ವಿಜ್ಞಾನಿ ಕೆ.ಪಿ.ರಾವ್ ಹೇಳಿದ್ದಾರೆ.
ಉಡುಪಿ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ ಹಾಗೂ ಉಡುಪಿ ಪಬ್ಲಿಕ್ ಫೋರಂ ವತಿಯಿಂದ ರವಿವಾರ ಉಡುಪಿ ಅಜ್ಜರಕಾಡು ಐಎಂಎ ಭವನದಲ್ಲಿ ಆಯೋಜಿಸಲಾದ ಪ್ರೊ.ಯು.ಆರ್.ರಾವ್ ಸಂಸ್ಮರಣೆ ಮತ್ತು ಶ್ರದ್ಧಾಂಜಲಿ ಸಭೆ ಯಲ್ಲಿ ಅವರು ಮಾತನಾಡುತಿದ್ದರು.
ಭಾರತದ ಸಾಮಾನ್ಯ ಜನರಿಗೆ ವಿಜ್ಞಾನದ ತಿಳಿಯಬೇಕು. ಮುಂದಿನ ಪೀಳಿಗೆಗೆ ಸರಳ ರೀತಿಯಲ್ಲಿ ವಿಜ್ಞಾನವನ್ನು ಹೇಳಿಕೊಡಬೇಕಾಗಿದೆ. ಇದರಿಂದ ಬಾಹ್ಯಾಕಾಶ ಕ್ಷೇತ್ರ ಭಾರತ ಮಹತ್ತರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ ಮಾತನಾಡಿದರು. ಪ್ರಭಾತ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Next Story





