ಪಾಕ್: ಆ.1 ರಂದು ನೂತನ ಪ್ರಧಾನಿ ಆಯ್ಕೆ

ಇಸ್ಲಾಮಾಬಾದ್, ಜು. 30: ಪದಚ್ಯುತ ಪ್ರಧಾನಿ ನವಾಝ್ ಶರೀಫ್‌ರ ಸ್ಥಾನದಲ್ಲಿ ನೂತನ ಪ್ರಧಾನಿಯನ್ನು ಪಾಕಿಸ್ತಾನದ ಸಂಸತ್ತು ಮಂಗಳವಾರ ಆರಿಸಲಿದೆ.
ಪಾಕಿಸ್ತಾನದ ಸುಪ್ರೀಂ ಕೋರ್ಟ್ ಶುಕ್ರವಾರ ಅಪ್ರಾಮಾಣಿಕತೆಗಾಗಿ 67 ವರ್ಷದ ಪ್ರಧಾನಿಯನ್ನು ಹುದ್ದೆಯಿಂದ ಅನರ್ಹಗೊಳಿಸಿದೆ ಹಾಗೂ ಪನಾಮ ದಾಖಲೆಗಳ ಹಗರಣಕ್ಕೆ ಸಂಬಂಧಿಸಿ ಅವರು ಮತ್ತು ಅವರ ಮಕ್ಕಳ ವಿರುದ್ಧ ಭ್ರಷ್ಟಾಚಾರ ಮೊಕದ್ದಮೆಗಳನ್ನು ದಾಖಲಿಸುವಂತೆ ಆದೇಶ ನೀಡಿದೆ.
ಕೆಳ ಸದನ ನ್ಯಾಶನಲ್ ಅಸೆಂಬ್ಲಿಯ ನೂತನ ನಾಯಕನನ್ನು ಆರಿಸುವುದಕ್ಕಾಗಿ ದೇಶದ ಅಧ್ಯಕ್ಷ ಮಮ್ನೂನ್ ಹುಸೈನ್ ಮಂಗಳವಾರ ಸಂಜೆ 3 ಗಂಟೆಗೆ ಸದನದ ಸಭೆ ಕರೆದಿದ್ದಾರೆ.
ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಝ್ (ಪಿಎಂಎಲ್-ಎನ್) ಸದ್ಯಕ್ಕೆ ಶಾಹಿದ್ ಖಾಕನ್ ಅಬ್ಬಾಸಿಯನ್ನು ಪ್ರಧಾನಿಯಾಗಿ ನೇಮಿಸಿದೆ. ಬಳಿಕ ಅವರು ತನ್ನ ಸ್ಥಾನವನ್ನು ಪಂಜಾಬ್ ಮುಖ್ಯಮಂತ್ರಿ ಶಹಬಾಝ್ ಶರೀಫ್‌ಗೆ ಬಿಟ್ಟುಕೊಡಲಿದ್ದಾರೆ.
ಶಹಬಾಝ್ ಶರೀಫ್ ಪ್ರಧಾನಿಯಾಗುವ ಮೊದಲು ಸಂಸದರಾಗಿ ಆಯ್ಕೆಯಾಗಬೇಕಾಗಿದೆ.
Next Story





