ದಲಿತರ ಸಹಕಾರಿ ಸಂಘ ಸ್ಥಾಪನೆ ಕುರಿತು ಸಮಾಲೋಚನಾ ಸಭೆ

ಮಲ್ಪೆ, ಜು.30: ಕರಾವಳಿ ದಲಿತ ಮೀನುಗಾರರ ಸಹಕಾರಿ ಸಂಘ ಸ್ಥಾಪಿಸುವ ಕುರಿತ ಸಮಾಲೋಚನ ಸಭೆಯನ್ನು ಶನಿವಾರ ಮಲ್ಪೆಯ ಲಯನ್ಸ್ ಭವನದಲ್ಲಿ ಆಯೋಜಿಸಲಾಗಿತ್ತು.
ಉಡುಪಿ ಸಹಕಾರಿ ಸಂಘಗಳ ಉಪನಿಬಂಧಕ ಪ್ರವೀಣ್ ಬಿ.ನಾಯಕ್ ಮಾತನಾಡಿ, ಸಮಾಜದಲ್ಲಿ ಶೋಷಿಶಲ್ಪಟ ಸಮುದಾಯ ಆರ್ಥಿಕವಾಗಿ ಸಬಲೀಕರಣಗೊಳ್ಳಲು ಸಹಕಾರಿ ಕ್ಷೇತ್ರ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಈ ಮೂಲಕ ಸಮಾಜಿಕ ಅಭಿವೃದ್ಧಿಗೂ ಕಾರಣವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎಸ್.ಎನ್. ರಮೇಶ್ ಮಾತನಾಡಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ದಲಿತರು ಬಲ ಗೊಳ್ಳದೆ ಸಾಮಾಜಿಕ ಬದಲಾವಣೆ ಅಸಾಧ್ಯ. ದಲಿತರ ಸಹಕಾರಿ ಸಂಘಕ್ಕೆ ತಮ್ಮ ಇಲಾಖೆಯಿಂದ ಎಲ್ಲಾ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ದೇವರಾಜ್, ಎಸ್‌ಡಿಸಿಸಿ ಬ್ಯಾಂಕ್‌ನ ಕಿನ್ನಿಮುಲ್ಕಿ ಶಾಖೆಯ ಸಿನಿಯರ್ ಮೆನೇಜರ್ ಸುನಿಲ್ ಲಕ್ಷ್ಮೀನಗರ, ಪಡುಬಿದ್ರೆ ಶಾಖೆಯ ಮೆನೇಜರ್ ಸುಧಾಕರ ಕಾಂಚನ್ ಬಾಪು ತೋಟ, ಸಮಾಜ ಪರಿವರ್ತನ ನಾಯಕ ಪದ್ಮನಾಭ ಬಂಗೇರ ಕಲ್ಮಾಡಿ, ಸಹಕಾರಿ ಸಂಘದ ನಿಬಂಧಕ ಸುಧೀರ್ ಕುಮಾರ್, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಭಾಸ್ಕರ್, ದಲಿತ ಮುಖಂಡ ಸುಂದರ ಕಪ್ಪಟ್ಟು, ರಮೇಶ್ ಪಾಲ್ ಮುಖ್ಯ ಅತಿಥಿಗಳಾಗಿದ್ದರು.
ಸಂಘಟನೆಯ ದಲಿತ ಮುಖಂಡರಾದ ದಸಂಸ ಮುಖಂಡ ಜಯನ್ ಮಲ್ಪೆ, ಹರೀಶ್ ಸಲ್ಯಾನ್ ನೆರ್ಗಿ, ಸುರೇಶ್ ಪಾಲನ್, ಪ್ರಸಾದ್ ಮಲ್ಪೆ, ಕುಮಾರ್ ತೊಟ್ಟಂ, ಶಶಿಕಲಾ ತೊಟ್ಟಂ, ಸಂಧ್ಯಾ ನೆರ್ಗಿ, ಗೀತಾ ಮಹಾಬಲ, ಪೂರ್ಣಿಮ ಬಲರಾಮನಗರ, ಹರೀಶ್ ತೊಟ್ಟಂ, ಉಡುಪಿ ನಗರಸಭಾ ಉಪಾದ್ಯಕ್ಷೆ ಸಂಧ್ಯಾ ತಿಲಕರಾಜ್, ವಾಸು ಮಾಸ್ತರ್, ವಸಂತ ತೊಟ್ಟಂ ಉಪಸ್ಥಿತರಿದ್ದರು.
ಗೀತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಗವನ್‌ದಾಸ್ ಸ್ವಾಗತಿಸಿದರು. ಕುಮಾರಿ ಕವಿತಾ ವಂದಿಸಿದರು. ನಗರಸಭಾ ಸದಸ್ಯ ಗಣೇಶ್ ನೆರ್ಗಿ ಕಾರ್ಯ ಕ್ರಮ ನಿರೂಪಿಸಿದರು.







