ಬಿಪಿಎಲ್ ಕುಟುಂಬಗಳಿಗೆ ಉಚಿತ ಹಲ್ಲಿನ ಸೆಟ್ ಅಳವಡಿಕೆ
ಮಂಗಳೂರು ಜು. 30: ರಾಜ್ಯ ಸರಕಾರದ ದಂತ ಭಾಗ್ಯ ಯೋಜನೆಯಲ್ಲಿ 45 ವರ್ಷ ದಾಟಿದ ಬಿಪಿಎಲ್ ಕುಟುಂಬದ ಜನರಿಗೆ ದಂತ ಪಂಕ್ತಿ ನೀಡುವ ಕಾರ್ಯಕ್ರಮ ಈಗಾಗಲೇ ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯಲ್ಲಿ 45 ವರ್ಷ ದಾಟಿದ ನಾಗರಿಕರು 3 ಅಥವಾ ಅದಕ್ಕಿಂತ ಹೆಚ್ಚು ಹಲ್ಲುಗಳನ್ನು ಕಳೆದುಕೊಂಡಿದ್ದಲ್ಲಿ ಅಥವಾ ಸಂಪೂರ್ಣ ಹಲ್ಲು ಇಲ್ಲದವರಿಗೆ ಗುಣಮಟ್ಟದ ದಂತ ಪಂಕ್ತಿಯನ್ನು ಉಚಿತವಾಗಿ ಅಳವಡಿಸಲಾಗುವುದು. ಜಿಲ್ಲೆಯ ಈ ಕೆಳಗಿನ ದಂತ ಕಾಲೇಜುಗಳಲ್ಲಿ ಯೋಜನೆ ಜಾರಿಯಲ್ಲಿದೆ.
1. ಶ್ರೀನಿವಾಸ ಡೆಂಟಲ್ ಕಾಲೇಜು ಮುಕ್ಕ, ಸುರತ್ಕಲ್
2. ಎ.ಜೆ. ಶೆಟ್ಟಿ ಡೆಂಟಲ್ ಕಾಲೇಜು ಕುಂಟಿಕಾನ ಮಂಗಳೂರು
3. ಯೆನಪೋಯ ಡೆಂಟಲ್ ಕಾಲೇಜು ದೇರಳಕಟ್ಟೆ
4. ಎ.ಬಿ ಶೆಟ್ಟಿ ಡೆಂಟಲ್ ಕಾಲೇಜು ದೇರಳಕಟ್ಟೆ
5. ಕೆಎಂಸಿ ಕಾಲೇಜ್ ಆಫ್ ಡೆಂಟಲ್ ಸಯನ್ಸ್, ಹಂಪನಕಟ್ಟೆ ಮಂಗಳೂರು
6. ಕೆ.ವಿ.ಜಿ. ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಸುಳ್ಯ
ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ತಮ್ಮ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರನ್ನು, ತಾಲೂಕು ಆಸ್ಪತ್ರೆ/ಸಮುದಾಯ ಆರೋಗ್ಯ ಕೇಂದ್ರದ ದಂತ ವೈದ್ಯರನ್ನು ಹಾಗೂ ದಂತ ಭಾಗ್ಯ ಯೋಜನೆಯ ನೋಡಲ್ ಅಧಿಕಾರಿ ಡಾ. ಲವೀನಾ ಜೆ. ನರೋನ್ಹಾ (ಮೊ.ಸಂ: 9242838922) ಇವರನ್ನು ಸಂಪರ್ಕಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟನೆ ತಿಳಿಸಿದೆ.







