ಜುನೈದ್ ಹತ್ಯೆ ಪ್ರಕರಣದ ಆರೋಪಿಗೆ ಜಾಮೀನು

ಗುರ್‌ಗಾಂವ್/ದಿಲ್ಲಿ, ಜು. 30: ಮಥುರಾಗೆ ತೆರಳುತ್ತಿದ್ದ ರೈಲಿನಲ್ಲಿ 15ರ ಹರೆಯದ ಜುನೈದ್‌ನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹರಿಯಾಣ ರೈಲ್ವೇ ಪೊಲೀಸರಿಂದ ಒಂದು ತಿಂಗಳ ಹಿಂದೆ ಬಂಧನಕ್ಕೆ ಒಳಗಾಗಿದ್ದ ಚಂದೇರ್ ಪ್ರಕಾಶ್‌ಗೆ ಫರಿದಾಬಾದ್‌ನ ನ್ಯಾಯಾಲಯ ಜಾಮಾನು ನೀಡಿದೆ. ಜುನೈದ್ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿರುವ ಚಂದರ್ ಪ್ರಕಾಶ್‌ಗೆ ನ್ಯಾಯಾಲಯ ಜಾಮೀನು ನೀಡಿದೆ. ಈತ ಪ್ರಕರಣದ ಮುಖ್ಯ ಆರೋಪಿ ಅಲ್ಲ.
ಆದರೆ, ಜುನೈದ್‌ಗೆ ಕಿರುಕುಳ ನೀಡಿದ ಆರೋಪಿಗಳಲ್ಲಿ ಈತನೂ ಒಬ್ಬ ಎಂದು ಹರಿಯಾಣ ರೈಲ್ವೇ ಪೊಲೀಸ್‌ನ ಡಿಎಸ್‌ಪಿ ಮೊಹಿಂದರ್ ಸಿಂಗ್ ತಿಳಿಸಿದ್ದ್ಜಾರೆ.
Next Story





