ತೆರಿಗೆ ಮರುಪಾವತಿ ದಾಖಲಿಸಲು ಜುಲೈ 31 ಕೊನೆಯ ದಿನ

ಹೊಸದಿಲ್ಲಿ, ಜು. 30: ವಿತ್ತ ವರ್ಷ 2016-17 ಅಥವಾ ವೌಲ್ಯ ಮಾಪನ ವರ್ಷ 2017-18ಕ್ಕೆ ಅನ್ವಯಿಸಿ ಆದಾಯ ತೆರಿಗೆ ಮರುಪಾವತಿ ಯನ್ನು ಜುಲೈ 31ರ ಒಳಗೆ ದಾಖಲಿಸಬೇಕು.
2016-17ರ ವಿತ್ತ ವರ್ಷದ ಆದಾಯ ತೆರಿಗೆ ಮರುಪಾವತಿ ದಾಖಲಿಸುವ ಕೊನೆ ದಿನಾಂಕ ಜುಲೈ 31 ಆಗಿದ್ದು, ದಿನಾಂಕವನ್ನು ವಿಸ್ತರಿಸುವುದಿಲ್ಲ ಎಂದು ಉನ್ನತ ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ಆದಾಯ ತೆರಿಗೆ ಮರುಪಾವತಿ ದಾಖಲಿಸಲು ಜುಲೈ 31 ಕೊನೆಯ ದಿನಾಂಕ. ಅಂತಿಮ ಗಡುವನ್ನು ವಿಸ್ತರಿಸುವ ಯಾವುದೇ ಚಿಂತನೆ ಇಲ್ಲ. 2 ಸಾವಿರ ಕೋಟಿ ತೆರಿಗೆ ಮರುಪಾವತಿ ದಾಖಲೆಯನ್ನು ಆನ್‌ಲೈನ್ ಮೂಲಕ ಸಂಸ್ಥೆ ಈಗಾಗಲೇ ಸ್ವೀಕರಿಸಿದೆ. ಕೊನೆಯ ದಿನಾಂಕದ ಒಳಗೆ ತೆರಿಗೆ ಪಾವತಿದಾರರು ತೆರಿಗೆ ಮರುಪಾವತಿ ದಾಖಲಿಸುವಂತೆ ಇಲಾಖೆ ಮನವಿ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ತೆರಿಗೆ ಮರುಪಾವತಿ ದಾಖಲಿಸುವವರು ಆಧಾರ್ ನಂಬರ್ ಅನ್ನು ಪಾನ್‌ಕಾರ್ಡ್‌ನೊಂದಿಗೆ ಜೋಡಿಸುವುದು ಕಡ್ಡಾಯವಾಗಿದ್ದು, ಇದು ಜುಲೈ 1ರಿಂದ ಆರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ.
Next Story





