150 ಐಸಿಸ್ ಉಗ್ರರ ಬ್ರಿಟಿಶ್ ಪಾಸ್‌ಪೋರ್ಟ್ ರದ್ದು
.jpg)
ಲಂಡನ್, ಜು. 30: 150ಕ್ಕೂ ಅಧಿಕ ಐಸಿಸ್ ಉಗ್ರರ ಬ್ರಿಟನ್ ಪಾಸ್‌ಪೋರ್ಟ್‌ಗಳನ್ನು ರದ್ದುಪಡಿಸಲಾಗಿದೆ. ಬ್ರಿಟನ್‌ನಲ್ಲಿ ದಾಳಿ ನಡೆಸುವುದಕ್ಕಾಗಿ ಅವರು ಸಿರಿಯದಲ್ಲಿರುವ ಐಸಿಸ್ ನಿಯಂತ್ರಿತ ಪ್ರದೇಶದಿಂದ ಹಿಂದಿರುಗಬಹುದು ಎಂಬ ಭೀತಿಯಲ್ಲಿ ಬ್ರಿಟನ್ ಸರಕಾರ ಈ ಕ್ರಮ ತೆಗೆದುಕೊಂಡಿದೆ.
ಲಂಡನ್ ಮತ್ತು ಮ್ಯಾಂಚೆಸ್ಟರ್‌ಗಳಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಗಳ ಹಿನ್ನೆಲೆಯಲ್ಲಿ ಈಗಾಗಲೇ 40ಕ್ಕೂ ಅಧಿಕ ಉಗ್ರರ ಬ್ರಿಟಿಶ್ ಪಾಸ್‌ಪೋರ್ಟ್‌ಗಳನ್ನು ರದ್ದುಪಡಿಸಲಾಗಿದೆ.
Next Story





