ಯುವಕ ನಾಪತ್ತೆ

ಮಣಿಪಾಲ, ಜು.30: ಶಾಂತಿನಗರ ಶಾಂತಲಾ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದ ಶಿವಮೊಗ್ಗದ ವಿಜಯಮ್ಮ ಎಂಬವರ ಪುತ್ರ ನಿರಂಜನ(26) ಎಂಬವರು ಜು.25ರಂದು ಬೆಳಗ್ಗೆ ತಲೆನೋವಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದಾಖಲಾತಿ ಚೀಟಿ ಮಾಡಿಸುವುದಾಗಿ ಹೇಳಿ ಹೋದವರು ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆ.
ಸಾದಾರಣ ಮೈಕಟ್ಟು ಹೊಂದಿದ್ದ ಇವರು, ಕಪ್ಪುಬಣ್ಣದ ಜೀನ್ಸ್ ಪ್ಯಾಂಟ್ ಮತ್ತು ತುಂಬು ತೋಳಿನ ಕಪ್ಪು ಸ್ವೇಟರ್ ಧರಿಸಿದ್ದರು. ಇವರ ಬಗ್ಗೆ ಮಾಹಿತಿ ತಿಳಿದಲ್ಲಿ ಮಣಿಪಾಲ ಪೊಲೀಸ್ ಠಾಣೆ ಅಥವಾ ಪೊಲೀಸ್ ಕಂಟ್ರೋಲ್ ರೂಂ (ದೂ.ಸಂ.:0820-2570328/2521257)ಗೆ ತಿಳಿಸುವಂತೆ ಮಣಿಪಾಲ ಠಾಣಾಧಿಕಾರಿ ಸುದರ್ಶನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





