ಹಾವು ಕಡಿತ: ಮಹಿಳೆ ಮೃತ್ಯು
ಅಮಾಸೆಬೈಲು, ಜು.30: ಶೇಡಿಮನೆ ಬೆಪ್ಡೆ ಎಂಬಲ್ಲಿ ವಿಷದ ಹಾವೊಂದು ಕಚ್ಚಿದ ಪರಿಣಾಮ ಮಹಿಳೆ ಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಶೇಡಿಮನೆ ಬೆಪ್ಡೆ ನಿವಾಸಿ ನರ್ಸಿ ಹಾಂಡ್ತಿ(65) ಎಂದು ಗುರುತಿಸಲಾಗಿದೆ. ಇವರು ಜು.27ರಂದು ತೋಟದಲ್ಲಿ ಹುಲ್ಲು ಕೊಯುತ್ತಿರುವಾಗ ಕಾಲಿಗೆ ವಿಷದ ಹಾವು ಕಚ್ಚಿತ್ತೆನ್ನಲಾಗಿದೆ. ಬಳಿಕ ಇವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಜು.29ರಂದು ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಗೆ ಬಂದಿದ್ದ ಇವರು ರಾತ್ರಿ ಮನೆಯಲ್ಲಿ ಮೃತಪಟ್ಟರು.
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





