ಡಿಎಸ್‌ಎಸ್, ಸಿಪಿಎಂ ನಿಯೋಗದಿಂದ ಕಾವ್ಯಾ ಪೋಷಕರ ಭೇಟಿ

ಮಂಗಳೂರು, ಜು. 30: ಅಸಹಜ, ಅನುಮಾನಾಸ್ಪದ ಸಾವಿಗೀಡಾದ ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಾ ಪೂಜಾರಿ ಮನೆಗೆ ಸಿಪಿಎಂ, ಡಿಎಸ್‌ಎಸ್ ಜಂಟಿ ನಿಯೋಗವು ಮಾಜಿ ಶಾಸಕ ಹಾಗೂ ಸಿಪಿಎಂ ಧುರೀಣ ಜಿ.ವಿ.ಶ್ರೀರಾಮರೆಡ್ಡಿ ನೇತೃತ್ವದಲ್ಲಿ ಭೇಟಿ ನೀಡಿತು.
ಕಾವ್ಯಾ ಕುಟುಂಬ ನ್ಯಾಯಕ್ಕಾಗಿ ನಡೆಸುವ ಹೋರಾಟದಲ್ಲಿ ಜೊತೆ ನಿಲ್ಲುವುದಾಗಿ ನಿಯೋಗ ಭರವಸೆ ನೀಡಿತು. ನಿಯೋಗದಲ್ಲಿ ಡಿಎಸ್‌ಎಸ್ ಮುಖಂಡರಾದ ರಘು ಎಕ್ಕಾರು, ಕೃಷ್ಣಾನಂದ ಡಿ., ಸಿಪಿಎಂ ಮುಖಂಡರಾದ ಯಾದವ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ದಲಿತ ಹಕ್ಕುಗಳ ಸಮಿತಿಯ ಶಂಕರ್ ಮೂಡಬಿದ್ರೆ, ಹಿರಿಯ ವಕೀಲರಾದ ಯಶವಂತ ಮರೋಳಿ, ಡಿವೈಎಫ್‌ಐ ಮುಖಂಡರಾದ ಮಿಥುನ್ ಕುತ್ತಾರ್, ರಿಯಾಝ್ ಮಾಂತೂರು, ಎಸ್‌ಎಫ್‌ಐ ಮುಖಂಡ ಚರಣ್ ಶೆಟ್ಟಿ ಪಂಜಿಮೊಗರು ಉಪಸ್ಥಿತರಿದ್ದರು.
Next Story





