ಕಾವ್ಯಾ ಅಸಹಜ ಮೃತ್ಯು ಪ್ರಕರಣ: ಡಿವೈಎಫ್ಐ ಸಭೆ

ನರಿಂಗಾನ, ಜು. 30: ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಅಸಹಜ ಸಾವಿನ ಸಮಗ್ರ ತನಿಖೆಗೆ ಒತ್ತಾಯಿಸಿ ಡಿವೈಎಫ್ ಐ ನೇತೃತ್ವದಲ್ಲಿ ಇಂದು ತೌಡುಗೋಳಿ ಕ್ರಾಸ್ ನಲ್ಲಿ ಕಾವ್ಯಾಳ ಹೆತ್ತವರ ನ್ಯಾಯಕ್ಕಾಗಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.
ಈ ಸಂದರ್ಭ ಎಸ್ಎಫ್ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್ ಮಾತನಾಡಿದರು. ಡಿವೈಎಫ್ಐ ಉಳ್ಳಾಲ ವಲಯ ಜೊತೆ ಕಾರ್ಯದರ್ಶಿ ರಝಾಕ್ ಮೊಂಟೆಪದವು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿ ಎಸ್ಎಫ್ಐ ಜಿಲ್ಲಾ ಉಪಾಧ್ಯಕ್ಷ ಹಂಝ ಕಿನ್ಯಾ, ಡಿವೈಎಫ್ಐ ಜಿಲ್ಲಾ ಉಪಾಧ್ಯಕ್ಷ ರಫೀಕ್ ಹರೇಕಳ, ಅಶ್ರಫ್ ಹರೇಕಳ ಆಗಮಿಸಿದರು.
ಸಭೆಯ ನೇತೃತ್ವವನ್ನು ಡಿವೈಎಫ್ಐ ಘಟಕ ನಾಯಕರಾದ ಸಿರಾಜ್ ಬಿ.ಎಂ, ಅಕ್ಬರ್ ಟಿ.ಸಿ.ರೋಡು, ನೌಸೀಫ್ ಕಲ್ಲರಕೋಡಿ, ಮುನೀರ್ ಮೊಂಟೆಪದವು, ಹನೀಫ್ ಟಿ.ಸಿ.ರೋಡ್, ಇರ್ಷಾದ್ ಮುಡಿಪು ಮತ್ತಿತರರು ವಹಿಸಿದರು.
Next Story





