ಆ.6: 'ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ' ವಾರ್ಷಿಕ ಸಂಭ್ರಮಾಚರಣೆ

ಮಂಗಳೂರು, ಜು. 30: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಪ್ರಥಮ ವರ್ಷದ ಸಂಭ್ರಮಾಚರನೆ ಆ. 6ರಂದು ಫಾರಂ ಫಿಝಾ ಮಾಲ್ ಪಾಂಡೇಶ್ವರ ಮಂಗಳೂರಿನಲ್ಲಿ ಬೆಳಗ್ಗೆ 9 ರಿಂದ ಸಂಜೆ 4 ರ ತನಕ ನಡೆಯಲಿದೆ.
ಕಾರ್ಯಕ್ರಮದಲ್ಲಿ ಬೃಹತ್ ರಕ್ತದಾನ ಶಿಬಿರ, ಮಕ್ಕಳ ಮನರಂಜನಾ ಕಾರ್ಯ ಹಾಗು ಸಾಧಕರಿಗೆ ಸನ್ಮಾನ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಫ್ತಿಕಾರ್ ಕೃಷ್ಣಾಪುರ ವಹಿಸಲಿದ್ದು, ಸಚಿವ ಯು.ಟಿ. ಖಾದರ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ವೇದಿಕೆಯಲ್ಲಿ ಸಚಿವ ರಮಾನಾಥ ರೈ, ಸಾಮಾಜಿಕ ನೇತಾರ ಹನೀಫ್ ಖಾನ್ ಕೋಡಾಜೆ, ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್, ಅಝೀಝ್ ದಾರಿಮಿ ಚೊಕ್ಕಬೆಟ್ಟು, ಪಿ.ರಾಮನಾಥ ಹೆಗ್ಡೆ ಮಂಗಳಾದೇವಿ, ವೆಲೇರಿಯನ್ ಡಿಸೋಜ ಮಿಲಾಗ್ರಿಸ್ ಚರ್ಚ್ ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.
Next Story





