ಅನ್ವರ್ ಶರೀಫ್‌ಗೆ ಜಾಗತಿಕ ಇಸ್ಲಾಮಿಕ್ ವ್ಯಕ್ತಿತ್ವ ಪ್ರಶಸ್ತಿ

ಬೆಂಗಳೂರು, ಜು.31: ಮಲೇಷ್ಯಾದ ಕೌಲಾಲಂಪುರದಲ್ಲಿ ಇತ್ತೀಚೆಗೆ ನಡೆದ ಜಾಗತಿಕ ಶಾಂತಿ, ಸಾಮರಸ್ಯ ಹಾಗೂ ಏಕತಾ ಸಮ್ಮೇಳನದಲ್ಲಿ ಬೆಂಗಳೂರಿನ ಜುಮ್ಮಾ ಮಸ್ಜಿದ್ ಟ್ರರ್ಸ್ಟ್ ಬೋರ್ಡ್ ಅಧ್ಯಕ್ಷ ಡಾ.ಅನ್ವರ್ ಶರೀಫ್ ಅವರಿಗೆ, ‘ಜಾಗತಿಕ ಇಸ್ಲಾಮಿಕ್ ವ್ಯಕ್ತಿತ್ವ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಲೇಷ್ಯಾದ ಮಾಜಿ ಪ್ರಧಾನಿ ತುನ್ ಮಹಾತೀರ್ ಮುಹಮ್ಮದ್ ಪ್ರಶಸ್ತಿ ಪ್ರದಾನ ಮಾಡಿದರು. ಅಲ್ಪಸಂಖ್ಯಾತರ ಶಿಕ್ಷಣ ಹಾಗೂ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಕಾಳಜಿ ಹೊಂದಿರುವ ಅನ್ವರ್ ಶರೀಫ್, ಈ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡಿಗರಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





