ಜಿಎಸ್‌ಟಿ ಕುರಿತು ಜಾಗೃತಿ ಕಾರ್ಯಕ್ರಮ

ಮಡಿಕೇರಿ, ಜು.31: ಕೊಡಗು ಜಿಲ್ಲಾ ಹೊಟೇಲ್, ರೆಸಾರ್ಟ್ ಮತ್ತು ಉಪಹಾರ ಗೃಹಗಳ ಸಂಘದ ಸಂಯುಕ್ತಾಶ್ರಯದಲ್ಲಿ ಜಿಎಸ್‌ಟಿ ತೆರಿಗೆ ಕುರಿತಾದ ಜಾಗೃತಿ ಕಾರ್ಯಕ್ರಮ ನಗರದಲ್ಲಿ ನಡೆಯಿತು.
ನಗರದ ಜಿಲ್ಲಾ ವಾಣಿಜೋದ್ಯಮಿಗಳ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಲೀಕರುಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡು ಜಿಎಸ್‌ಟಿ ತೆರಿಗೆಯ ಬಗ್ಗೆ ಮಾಹಿತಿ ಪಡೆದರು. ಮೈಸೂರು ಕೇಂದ್ರೀಯ ತೆರಿಗೆ ಆಯುಕ್ತರಾದ ವೆಂಕಟೇಶ್ ಹಾಗೂ ಜಂಟಿ ಆಯುಕ್ತರಾದ ರವಿಕಿರಣ್ ಜಿಎಸ್‌ಟಿ ಬಗೆಗಿನ ಗೊಂದಲಗಳನ್ನು ನಿವಾರಿಸಿ ಸಮಗ್ರ ವರದಿಯನ್ನು ನೀಡಿದರು.
ಹೊಟೇಲ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷರಾದ ನಾಗೇಂದ್ರ ಪ್ರಸಾದ್, ನಗರಾಧ್ಯಕ್ಷರಾದ ಮೊಹಮ್ಮದ್ ಆಸಿಫ್, ಖಜಾಂಚಿ ಭಾಸ್ಕರ್, ಪ್ರಧಾನ ಕಾರ್ಯದರ್ಶಿ ವೆಂಕಟರಾ ಮನ್, ಉಪಾಧ್ಯಕ್ಷ ಜಹೀರ್ ಅಹಮ್ಮದ್, ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಿಎಸ್‌ಟಿ ಬಗ್ಗೆ ಮಾಹಿತಿ ಪಡೆದರು.
Next Story





