ಜಾನಪದ ಸೊಗಡನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ: ಬಿ.ಬಿ.ನಿಂಗಯ್ಯ
ಕರ್ನಾಟಕ ಜಾನಪದ ಪರಿಷತ್ತಿನ ಪೂರ್ವಭಾವಿ ಸಭೆ

ಮೂಡಿಗೆರೆ, ಜು.31: ನಮ್ಮ ರಾಜ್ಯದಲ್ಲಿ ಕಲೆ, ಸಾಹಿತ್ಯ ಹಾಗೂ ಕನ್ನಡದ ಸಿರಿವಂತಿಕೆ ಬಗ್ಗೆ ಬಹು ದೊಡ್ಡ ಇತಿಹಾಸವಿದೆ. ಅದನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಶಾಸಕ ಬಿ.ಬಿ.ನಿಂಗಯ್ಯ ತಿಳಿಸಿದರು.
ಅವರು ಸೋಮವಾರ ಪಟ್ಟಣದ ತಾಪಂಸಭಾಂಗಣದಲ್ಲಿ ನೂತನವಾಗಿ ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಘಟಕವನ್ನು ಉದ್ಘಾಟನಾಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ದಕ್ಷಿಣ ಕನ್ನಡದ ಜನರು ಯಕ್ಷಗಾನ ನಶಿಸಿ ಹೋಗದಂತೆ ಅದನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಕಂಬಳವನ್ನು ರದ್ದುಪಡಿಸಲು ನ್ಯಾಯಾಲಯದ ಮುಂದೆ ನಿಂತರೂ ಅದನ್ನು ಕೈಬಿಡಲಿಲ್ಲ. ನ್ಮಮ ಸಂಸ್ಕೃತಿ ಹಾಗೂ ಕಲೆಯನ್ನು ಉಳಿಸುವಂತಹ ಮನೋಭಾವನೆ ಎಲ್ಲರಲ್ಲೂ ಮೂಡಬೇಕಾಗಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಅವರದೇ ಆದ ವಿವಿಧ ರೀತಿಯಲ್ಲಿ ಜಾನಪದ ಕಲೆಗಳಿವೆ. ನಮ್ಮ ಮಲೆನಾಡಿನ ಜಾನಪದ ಸೊಗಡನ್ನು ನಮ್ಮಲ್ಲಿರುವ ಕಲಾವಿದರನ್ನು ಹೊರತರುವ ಕೆಲಸವನ್ನು ಕರ್ನಾಟಕ ಜಾನಪದ ಪರಿಷತ್ತು ಮಾಡಬೇಕು ಎಂದು ಸಲಹೆ ನೀಡಿದರು.
ಎಂಎಲ್‌ಸಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಹಳ್ಳಿಗಳಳು ಹಾಗೂ ಅಭಿವೃದ್ಧಿ ಕಾಣದ ಕುಗ್ರಾಮಗಳಲ್ಲಿ ಮಾತ್ರ ಜಾನಪದ ಉಳಿದಿದೆ. ಮನುಷ್ಯ ಅಭಿವೃದ್ಧಿ ಹೊಂದಿದಂತೆ ಎಲ್ಲವನ್ನು ಮರೆತು ಆಧುನಿಕ ಯುಗದತ್ತ ಮುಖ ಮಾಡುತ್ತಿದ್ದಾನೆ. ಹಿಂದೆ ಇದ್ದ ದಿನನಿತ್ಯದ ಚಟುವಟಿಕೆ, ಆಹಾರ ಮತ್ತು ಆರೋಗ್ಯದ ವಾತಾವಣವನ್ನು ಇಂದು ಕಾಣಲು ಸಾಧ್ಯವಿಲ್ಲ ಎಂದಿ ಹೇಳಿದರು.
ಹಿಂದೆ ಕೃಷಿ, ಅಡುಗೆ ಸೇರಿದಂತೆ ವಿವಿಧ ರೀತಿಯ ಕೆಲಸ ಕಾರ್ಯಗಳಿಗೆ ಜಾನಪದ ಹಾಡುಗಳು ಹಾಗೂ ಪರಿಕರಗಳನ್ನು ಉಪಯೋಗಿಸುತ್ತಿರುವುದರಿಂದ ಅನಾರೋಗ್ಯಕ್ಕೆ ಬಳಲದೆ ಸುಖ ಜೀವನ ನಡೆಸುತ್ತಿದ್ದರು. ಆದರೆ ಇಂದಿನ ಯುಗದಲ್ಲಿ ಎಲ್ಲಾ ಕೆಲಸಗಳಿಗೆ ಯಂತ್ರಗಳನ್ನು ಬಳಸುವುದರಿಂದ ಹಳೆಯ ವಸ್ತುಗಳೆಲ್ಲಾ ಮಾಯವಾಗಿದೆ. ಉತ್ತಮ ಆರೋಗ್ಯ ಹಾಗೂ ನೆಮ್ಮದಿಯ ಜೀವನ ನಡೆಸಲು ಜಾನಪದ ಸೊಗಡನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೂತನ ಅಧ್ಯಕ್ಷ ಸುಭ್ರಮಣ್ಯ ವಹಿಸಿದ್ದರು. ತಾಪಂ ಅಧ್ಯಕ್ಷ ಕೆ.ಸಿ.ರತನ್, ತಾಪಂ ಇಓಗುರುದತ್, ಹಿರಿಯ ಕಾಫಿ ಬೆಳೆಗಾರ ಬಾಲಕೃಷ್ಣೇಗೌಡ, ಪ್ರಧಾನ ಪೋಷಕ ರಘು ಮತ್ತಿತ







