ಕಿನ್ಯ-ಮಂಜನಾಡಿ ಸಲಫಿ ಸೆಂಟರ್ ಎಸ್.ಕೆ.ಎಸ್.ಎಂ. ಸುಪರ್ದಿಗೆ
ಮಂಗಳೂರು, ಜು. 31: ಕಿನ್ಯ-ಮಂಜನಾಡಿ ಸಲಫಿ ಕಲ್ಚರಲ್ ಸೆಂಟರ್‍ನ ಅಧೀನದಲ್ಲಿ ಕಳೆದ 15 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸಲಫಿ ಮಸೀದಿ ಮತ್ತು ಮದ್ರಸಗಳು ಸೌತ್ ಕರ್ನಾಟಕ ಸಲಫಿ ಮೂವ್‍ಮೆಂಟ್‍ನ ಸುಪರ್ದಿಗೆ ಹಸ್ತಾಂತರ ಗೊಂಡವು.
ಸಲಫಿ ಮೂವ್‍ಮೆಂಟ್‍ನ ಕೇಂದ್ರ ಸಮಿತಿ ಅಧ್ಯಕ್ಷ ಯು.ಎನ್.ಅಬ್ದುಲ್ ರಝಾಕ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಹಸ್ತಾಂತರ ಸಮಾರಂಭದಲ್ಲಿ ಎಸ್.ಕೆ.ಎಸ್.ಎಂ.ನ ಉಪಾಧ್ಯಕ್ಷ್ಯ ಇಸ್ಮಾಯೀಲ್ ಶಾಫಿ, ಕಾರ್ಯದರ್ಶಿ ಎಂ.ಜಿ. ಮುಹಮ್ಮದ್, ಪದಾಧಿಕಾರಿಗಳಾದ ರಿಯಾಝ್ ಅಹ್ಮದ್, ಬಾಷಾ ಕಂಕನಾಡಿ, ಅಹ್ಮದ್ ಮಾಸ್ಟರ್ ದೇರಳಕಟ್ಟೆ, ಮುಂತಾದವರು ಉಪಸ್ಥಿತರಿದ್ದರು.
ಕಿನ್ಯ-ಮಂಜನಾಡಿ ಸಲಫಿ ಮಸೀದಿ-ಮದ್ರಸಗಳ ಆಡಳಿತ ನಿರ್ವಹಣೆಗೆ ಸಮಿತಿ ರಚಿಸಲಾಯಿತು. ಮುತವಲ್ಲಿಯಾಗಿ ಯು.ಎನ್.ಅಬ್ದುಲ್ ರಝಾಕ್, ಖಾದಿಮ್ ಬಿ.ಐ.ಮೂಸಬ್ಬ, ಉಪಖಾದಿಮ್ ಮುಹಮ್ಮದ್ ಶಾ, ಕಾರ್ಯದರ್ಶಿ ಎನ್.ಕೆ. ಮುಹಮ್ಮದ್, ಜತೆಕಾರ್ಯದರ್ಶಿ ಅಬ್ದುಸ್ಸಲಾಂ ಪಿ.ಎಸ್.ಕೆ., ಕೋಶಾಧಿಕಾರಿ ಮೊಯ್ದಿನ್ ಹನೀಫ್, ದಾವಾ ಕಾರ್ಯದರ್ಶಿ ಬಿ.ಐ.ಮಹಮೂದ್, ಕಾರ್ಯಕಾರಿ ಸದಸ್ಯರಾಗಿ ಹುಸೈನ್ ಕಲ್ಕಟ್ಟ, ಮುಹಮ್ಮದ್ ಅಶ್ರಫ್, ಇಕ್ಬಾಲ್, ಇಸ್ಮಾಈಲ್ ಕೆ.ಕೆ. ಮತ್ತು ಇಬ್ರಾಹಿಂ ಖಲೀಲ್ ಆಯ್ಕೆಯಾದರು. ಬಿ.ಐ. ಮಹಮೂದ್ ಸ್ವಾಗತಿಸಿ, ಎನ್.ಕೆ.ಮುಹಮ್ಮದ್ ವಂದಿಸಿದರು.







