ವಿದ್ಯಾರ್ಥಿ ನಾಪತ್ತೆ
ಅಜೆಕಾರು, ಜು.31: ಮರ್ಣೆ ಗ್ರಾಮದ ಎಣ್ಣೆಹೊಳೆ ನಡಿಮಾರು ನಿವಾಸಿ ಸಿದ್ದಪ್ಪನಾಯ್ಕ ಎಂಬವರ ಪುತ್ರ ಹಾಗೂ ಎಣ್ಣೆಹೊಳೆ ರಾಧಾ ನಾಯಕ್ ಪ್ರೌಢ ಶಾಲೆಯ 10ನೆ ತರಗತಿಯ ವಿದ್ಯಾರ್ಥಿ ಗುರುಪ್ರಸಾದ್(16) ಎಂಬಾತ ಜು.7ರಂದು ಬೆಳಗ್ಗೆ 9ಗಂಟೆಗೆ ಮನೆಯಿಂದ ಶಾಲಾ ಸಮವಸ್ತ್ರ ಧರಿಸಿ ಬ್ಯಾಗ್ ನೊಂದಿಗೆ ಶಾಲೆಗೆ ಹೋದವನು ಶಾಲೆಗೂ ಹೋಗದೆ ಮನೆಗೂ ಬಾರದೆ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





