ದ.ಕ.ಜಿಲ್ಲಾ ಗಿಲ್‌ನೆಟ್ ಮೀನುಗಾರರ ಸಂಘದ ಸಭೆ
ಮಂಗಳೂರು, ಆ.1: ದ.ಕ.ಜಿಲ್ಲಾ ಗಿಲ್‌ನೆಟ್ ಮೀನುಗಾರರ ಸಂಘದ ವಾರ್ಷಿಕ ಮಹಾಸಭೆಯು ಟ್ರಾಲ್ ಬೋಟ್ ಯೂನಿಯನ್ ಕಟ್ಟಡದಲ್ಲಿ ಸಂಘದ ಅಧ್ಯಕ್ಷ ಅಲಿ ಹಸನ್‌ರ ಅಧ್ಯಕ್ಷತೆಯಲ್ಲಿ ಜರಗಿತು.
ಮೋಟಾರೀಕೃತ ನಾಡದೋಣಿಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಸೀಮೆ ಎಣ್ಣೆ ವಿತರಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ಪ್ರಸಕ್ತ ಸಾಲಿನಲ್ಲಿ ಸಹಾಯಧನ ರಹಿತ ಸೀಮೆಎಣ್ಣೆಯನ್ನು ಸರಕಾರ ಖರೀದಿಸಿ ಬಳಿಕ ಸಹಾಯಧನ ದರದಲ್ಲಿ ಮೀನುಗಾರಿಕಾ ದೋಣಿಗಳಿಗೆ ಪೂರೈಸುವ ಸಲುವಾಗಿ ಪ್ರತೀ ಲೀ.ಗೆ 56 ರೂ.ನಂತೆ ಮೀನುಗಾರರು ಖರೀದಿಸಿ ಬಳಿಕ ಲೀ.ಗೆ 33 ರೂ. ಸಹಾಯಧನ ಸಬ್ಸಿಡಿಯಾಗಿ ನೇರ ಬ್ಯಾಂಕ್ ಖಾತೆಗೆ ಪೂರೈಸುವುದರ ವಿರುದ್ಧ ನಿರ್ಣಯ ಕೈಗೆತ್ತಿಕೊಳ್ಳಲಾಯಿತು.
ದುಬಾರಿ ಹಣ ಕೊಟ್ಟು ಮೀನುಗಾರರು ಸೀಮೆಎಣ್ಣೆ ಖರೀದಿಸಲು ಅಸಾಧ್ಯ. ಹಾಗಾಗಿ ಈ ಮೊದಲು ನೀಡಿದಂತೆ ಸೀಮೆಎಣ್ಣೆಯನ್ನು ಒದಗಿಸುವಂತೆ ಮುಖ್ಯಮಂತ್ರಿ, ಮೀನುಗಾರಿಕಾ ಸಚಿವರು, ಶಾಸಕರು, ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸರಕಾರ ಈ ಬೇಡಿಕೆಯನ್ನು ಪರಿಗಣಿಸದಿದ್ದರೆ ಹೋರಾಟ ನಡೆಸಲು ಪ್ರಧಾನ ಕಾರ್ಯದರ್ಶಿ ಬಿ.ಎ. ಬಶೀರ್ ಲೆಕ್ಕಪತ್ರ ಮಂಡಿಸಿ, ವರದಿ ವಾಚಿಸಿದರು.





