ಮಂಚಿ ಸುನ್ನಿ ಮಹಲ್ ಸಮಿತಿ ರಚನೆ

ಉಳ್ಳಾಲ, ಆ.1: ಮಂಚಿ, ಕೊಳ್ನಾಡುನಲ್ಲಿ ಸ್ಥಾಪಿಸಲ್ಪಟ್ಟ ಸುನ್ನಿ ಮಹಲ್‌ನ ಸಮಿತಿಯು ಇತ್ತೀಚೆಗೆ ಶೈಖುನಾ ಇಬ್ರಾಹೀಂ ಮದನಿ ಮಂಚಿಯವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು. ಸುನ್ನಿ ಮಹಲ್ ಸ್ಥಾಪಕ ಸಿ.ಎಂ. ಅಬೂಬಕ್ಕರ್ ಲತೀಫಿ ಎಣ್ಮೂರು ಸಭೆ ಉದ್ಘಾಟಿಸಿದರು.
ಸಮಿತಿಯ ನಿರ್ದೇಶಕರಾಗಿ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್, ಸೈಯದ್ ಖಾಸಿಂ ತಂಙಳ್ ಸಾಲೆತ್ತೂರು, ಅಧ್ಯಕ್ಷರಾಗಿ ಶೈಖುನಾ ಇಬ್ರಾಹೀಂ ಮದನಿ ಮಂಚಿ, ಉಪಾಧ್ಯಕ್ಷರಾಗಿ ನಿಸಾರ್ ಹಾಜಿ ಈಶ್ವರಮಂಗಿಲ, ಟಿ.ಕೆ. ಇಸ್ಮಾಯೀಲ್ ಸಅದಿ, ಬದ್ರುದ್ದೀನ್ ಕಯ್ಯೂರು, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎಂ.ಅಬೂಬಕ್ಕರ್ ಲತೀಫಿ ಎಣ್ಮೂರು, ಕಾರ್ಯದರ್ಶಿಯಾಗಿ ಅಬ್ದುರ್ರಝಾಕ್ ಖಂಡಿಗ, ಎ.ಎಂ. ರಫೀಖ್ ಝುಹ್ರಿ, ಸಂಘಟಕರಾಗಿ ಬದ್ರುದ್ದೀನ್ ಹಾಜಿ ಕುಕ್ಕಾಜೆ,ಮಾಧ್ಯಮ ಕಾರ್ಯದರ್ಶಿಯಾಗಿ ಬಿ. ಇಬ್ರಾಹೀಂ ಖಲೀಲ್ ಮುಸ್ಲಿಯಾರ್, ಕೋಶಾಧಿಕಾರಿಯಾಗಿ ಮುಹಮ್ಮದ್ ಹಾಜಿ ಮೋಂತಿಮಾರ್, ಸದಸ್ಯರಾಗಿ ಶರೀಫ್ ನಾಡಾಜೆ, ಉಸ್ಮಾನ್ ಮಂಚಿ, ಇಬ್ರಾಹಿಂ ಮಂಚಿ ಕೋಕಳ ಆಯ್ಕೆಯಾದರು. ಬಿ. ಇಬ್ರಾಹೀಂ, ಖಲೀಲ್ ಮುಸ್ಲಿಯಾರ್ ಸ್ವಾಗತಿಸಿ ವಂದಿಸಿದರು.





