2014-16ರ ಅವಧಿಯಲ್ಲಿ 1.13 ಲ.ಅಪರಿಚಿತ ಶವಗಳು ಪತ್ತೆ: ಅಹಿರ್

ಹೊಸದಿಲ್ಲಿ,ಆ.1: 2014 ಮತ್ತು 2016ರ ನಡುವೆ ದೇಶಾದ್ಯಂತ ಒಟ್ಟು 1,13,092 ಅಪರಿಚಿತ ಶವಗಳು ಪತ್ತೆಯಾಗಿವೆ ಮತ್ತು ಅವುಗಳ ಮಹಜರು ಮಾಡಲಾಗಿದೆ ಎಂದು ಸಹಾಯಕ ಗೃಹಸಚಿವ ಹಂಸರಾಜ್ ಗಂಗಾರಾಮ ಅಹಿರ್ ಅವರು ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದರು.
ಈ ಪೈಕಿ 2014ರಲ್ಲಿ 43,283, 2015ರಲ್ಲಿ 34,592 ಮತ್ತು 2016ರಲ್ಲಿ 35,215 ಶವಗಳು ಪತ್ತೆಯಾಗಿವೆ. ಅತ್ಯಂತ ಹೆಚ್ಚಿನ ಶವಗಳು(17,313) ಮಹಾರಾಷ್ಟ್ರದಲ್ಲಿ ಪತ್ತೆಯಾಗಿವೆ. ನಂತರದ ಸ್ಥಾನಗಳಲ್ಲಿ ಪಶ್ಚಿಮ ಬಂಗಾಳ(11,824) ಮತ್ತು ಉತ್ತರ ಪ್ರದೇಶ(10,779) ರಾಜ್ಯಗಳಿವೆ ಎಂದರು.
Next Story





