ಬಿಎಸ್‌ಎನ್‌ಎಲ್ ಪಾಕ್ಷಿಕ ಉತ್ಸವಕ್ಕೆ ಚಾಲನೆ
ಮಡಿಕೇರಿ, ಆ.1: ಭಾರತ್ ಸಂಚಾರ ನಿಗಮ ವತಿಯಿಂದ ಬಿಎಸ್‌ಎನ್‌ಎಲ್ ಹೊಸ ಸೇವೆ ಮತ್ತು ಕೊಡುಗೆಗಳ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಆ.
15 ರವರೆಗೆ ಬಿಎಸ್‌ಎನ್‌ಎಲ್ ಉತ್ಸವಕ್ಕೆ ಮಂಗಳವಾರ ನಗರದ ಬಿಎಸ್‌ಎನ್‌ಎಲ್ ಗ್ರಾಹಕ ಕೇಂದ್ರದಲ್ಲಿ ಚಾಲನೆ ದೊರೆಯಿತು.
ಜಿಲ್ಲೆಯ ಜಿಲ್ಲಾ ಕೇಂದ್ರ ಮಡಿಕೇರಿ, ಸೋಮವಾರಪೇಟೆ, ಸುಂಟಿಕೊಪ್ಪ, ಶನಿವಾರಸಂತೆ, ಕುಶಾಲನಗರ, ವಿರಾಜಪೇಟೆ, ಗೋಣಿಕೊಪ್ಪ, ಸಿದ್ದಾಪುರಗಳಲ್ಲಿ ಗ್ರಾಹಕ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಕೇಂದ್ರಗಳಲ್ಲಿ ಬಿಎಸ್‌ಎನ್‌ಎಲ್‌ನ ಹೊಸ ಸೇವೆಗಳು ಮತ್ತು ಕೊಡುಗೆಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಬಿಎಸ್‌ಎನ್‌ಎಲ್ ಸಿಮ್ ವಿತರಣೆ, ಬಿಲ್ಲುಗಳನ್ನು ಸ್ವೀಕರಿಸುವುದು, ರೀಚಾರ್ಜ್ ಮಾಡುವುದು ಮತ್ತಿತರ ಕಾರ್ಯಗಳು ನಡೆಯಲಿವೆ ಎಂದು ಭಾರತ ಸಂಚಾರ್ ನಿಗಮದ ಜಿಲ್ಲಾ ಪ್ರಬಂಧಕರಾದ ಮುಕ್ಕಾಟ್ಟೀರ ಪಿ.ಸುಬ್ಬಯ್ಯ ಅವರು ತಿಳಿಸಿದರು.
ಬಿಎಸ್‌ಎನ್‌ಎಲ್ ಉತ್ಸವ ಪ್ರಯುಕ್ತ ಗ್ರಾಹಕರ ಸ್ಥಿರ ದೂರವಾಣಿ ಮರು ಜೋಡಣಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದ್ದು, ಈ ಸಂಬಂಧ ಶುಲ್ಕ ರಹಿತವಾಗಿ ಒಂದು ತಿಂಗಳ ಅವಧಿಯಲ್ಲಿ ಉಚಿತವಾಗಿ ಸೇವೆ ಒದಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಗ್ರಾಹಕರ ಈ ಸೌಲಭ್ಯವನ್ನು ಪಡೆಯುವಂತಾಗಬೇಕು ಎಂದು ಅವರು ತಿಳಿಸಿದ್ದಾರೆ. ಗ್ರಾಹಕರಿಗೆ ಮತ್ತಷ್ಟು ಸೇವೆಗಳ್ನು ಒದಗಿಸುವುದು ಜೊತೆಗೆ ಸಾರ್ವಜನಿಕರಿಗೆ ಇನ್ನಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ಬಿಎಸ್‌ಎನ್‌ಎಲ್ ಉತ್ಸವವನ್ನು ಹಮ್ಮಿಕೊಳ್ಳಲಾಗುತ್ತಿದೆ. ಹೊಸ ಸೇವೆಗಳಲ್ಲಿ 5 ಜಿ ಸೇವೆ ನೀಡಲು ಬಿಎಸ್‌ಎನ್‌ಎಲ್ ಮುಂದಾಗುತ್ತಿವೆ ಎಂದು ಅವರು ಹೇಳಿದರು. ಬಿಎಸ್‌ಎನ್‌ಎಲ್‌ನ ಮುಖ್ಯ ಲೆಕ್ಕಾಧಿಕಾರಿ ಪದ್ಮಾವತಿ, ಮಾರುಕಟ್ಟೆ ವಿಭಾಗದ ಅಧಿಕಾರಿ ಲಿಂಗಪ್ಪಗೌಡ, ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ರವಿಕುಮಾರ್, ಶರತ್‌ಚಂದ್ರ ಭಟ್ ಇತರರು ಹಾಜರಿದ್ದರು.







