ಎಚ್ಚರ: ಈ ಶತಮಾನವನ್ನು ಕಾಡಲಿದೆ ಜಾಗತಿಕ ಉಷ್ಣತೆ

ಲಂಡನ್, ಆ.1: ಈ ಶತಮಾನದಲ್ಲಿ ಜಾಗತಿಕ ಉಷ್ಣತೆಯು 2 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಅಧಿಕ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಸೋಮವಾರ ಹೇಳಿದ್ದಾರೆ. ಇದು ಜಾಗತಿಕ ಹವಾಮಾನ ಒಪ್ಪಂದವು ತಡೆಯಲು ಉದ್ದೇಶಿಸಿರುವ ಮಟ್ಟಕ್ಕಿಂತಲೂ ಹೆಚ್ಚಾಗಿದೆ.
ಈ ಶತಮಾನದಲ್ಲಿ ಜಾಗತಿಕ ಉಷ್ಣತೆಯು 2 ಡಿಗ್ರಿಯಿಂದ 4.9 ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚುವ ಸಾಧ್ಯತೆ 90 ಶೇಕಡದಷ್ಟಿದೆ ಎಂದು ‘ನೇಚರ್ ಕ್ಲೈಮೇಟ್ ಚೇಂಜ್’ ಪತ್ರಿಕೆಯಲ್ಲಿ ಪ್ರಕಟಗೊಂಡ ಅಧ್ಯಯನವೊಂದು ಹೇಳಿದೆ.
ಉಷ್ಣತೆಯು 2 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಕಡಿಮೆಯಿರುವ ಸಾಧ್ಯತೆ ಕೇವಲ 5 ಶೇಕಡ ಎಂದು ವಾಶಿಂಗ್ಟನ್ ವಿಶ್ವವಿದ್ಯಾನಿಲಯದ ಸಂಶೋಧಕರು ಪತ್ತೆಹಚ್ಚಿದ್ದಾರೆ.
ಉಷ್ಣತೆಯ ಹೆಚ್ಚಳವನ್ನು ಈ ಶತಮಾನದಲ್ಲಿ 2 ಡಿಗ್ರಿ ಸೆಲ್ಸಿಯಸ್‌ಗೆ ನಿಯಂತ್ರಿಸುವ ಗುರಿಯನ್ನು 2015ರಲ್ಲಿ ಪ್ಯಾರಿಸ್‌ನಲ್ಲಿ ಸಹಿ ಹಾಕಲಾದ ಹವಾಮಾನ ಒಪ್ಪಂದ ಹೇಳುತ್ತದೆ.
Next Story





