ಇನ್ನೊಂದು ವಾರದಲ್ಲಿ ಗಾಂಜ, ಮಟ್ಕ ದಂಧೆಕೋರರ ಬಂಧಿಸಿ ಗಡಿಪಾರು: ಎಸ್ಪಿ ಕಡಕ್ ಎಚ್ಚರಿಕೆ
.jpg)
ಹಾಸನ, ಆ.1: ಇನ್ನೊಂದು ವಾರದಲ್ಲಿ ಗೂಂಡಗಳು, ಗಾಂಜ, ಮಟ್ಕದಲ್ಲಿ ತೊಡಗಿರುವ ದಂಧೆಕೋರರನ್ನು ಬಂಧಿಸಿ ಜಿಲ್ಲೆಯಿಂದ ಗಡಿಪಾರು ಮಾಡುವುದಾಗಿ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಕಡಕ್ ಎಚ್ಚರಿಕೆ ನೀಡಿದರು.
ನಗರದ ಎಂ.ಜಿ. ರಸ್ತೆ, ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ರಾಜ್ಯ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯಿಂದ ಮಂಗಳವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಸುಧಾರಿತ ಗಸ್ತು ಸರ್ವ ಸದಸ್ಯರ ಸಭೆಯನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಗರದಲ್ಲಿ ಅನೇಕಗೂಂಡಗಳು ಪೊಲೀಸ್‌ಗೆ ಸೆರೆ ಸೆಕ್ಕಿ ನಂತರ ಸಮಾಜದಲ್ಲಿ ನಾವು ಉತ್ತಮರಾಗಿ ಇರುತ್ತೇವೆ ಎಂದು ಹೇಳಿ ಬಿಡುಗಡೆಯಾದ ಬಳಿಕ ಮತ್ತೆ ತಮ್ಮ ಕ್ರೌರ್ಯವನ್ನು ಮುಂದುವರೆಸುತ್ತಿರುವ ಬಗ್ಗೆ ದೂರುಗಳು ಬಂದಿದೆ. ಯಾರೆ ಆಗಲಿ ರೌಡಿಗಳಿಗೆ ಆಸ್ಪದ ಕೊಡಬಾರದು. ಕಳ್ಳ ಪೋಕರಿಗೆ ಗಾಂಜ ನಿರಂತರವಾಗಿ ಸಿಗುತ್ತಿದೆ. ಆದರೇ ಪೊಲೀಸರಿಗೆ ಮಾಹಿತಿ ತಿಳಿಯುತ್ತಿಲ್ಲ. ಹಗೇ ಮಟ್ಕ ದಂಧೆಗೂ ಮಟ್ಟ ಹಾಕಬೇಕಾಗಿದೆ. ಈ ಬಗ್ಗೆ ಹೆಣ್ಣು ಮಕ್ಕಳು ಮಾಹಿತಿ ನೀಡಿದ್ದಾರೆ. ಇಂತಹವರು ಸಮಾಜದಲ್ಲಿ ಇರಲು ಅನರ್ಹರು ಆಗಿದ್ದು, ಇವರನ್ನು ಸೂಕ್ಷ್ಮವಾಗಿ ಗಮನಿಸಿ ಇನ್ನೊಂದು ವಾರದೊಳಗೆ ಬಹುತೇಕ ಎಲ್ಲಾರನ್ನು ಬಂಧಿಸಿ ಗೂಂಡ ವ್ಯಾಪ್ತಿಯಲ್ಲಿ ಬಂಧಿಸಿ ಗಡಿಪಾರು ಮಾಡುವುದಾಗಿ ಕೋಪದಿಂದ ಹೇಳಿದರು.
ರಾತ್ರಿ ವೇಳೆ ರಿಂಗ್ ರಸ್ತೆಯಲ್ಲಿ ಅನೇಕರು ಅಲ್ಲಲ್ಲೆ ರಸ್ತೆ ಬಳಿ ಮಧ್ಯಪಾನ ಸೇವನೆ ಮಾಡುತ್ತಿದ್ದಾರೆ. ಎಲ್ಲದಕ್ಕೂ ಜನರು ಸಹಕಾರ ಕೊಟ್ಟರೇ ಇಂತಹದನ್ನು ತಡೆಯಬಹುದು ಎಂದರು. ಆಯಾ ಭಾಗಗಳಲ್ಲಿ ನಡೆಯುವ ಅಪರಾಧವನ್ನು ತಡೆಯಲು ಗಸ್ತು (ಬೀಟ್) ವ್ಯವಸ್ಥೆ ಜಾರಿಗೆ ತರಲಾಗಿದೆ. ಹಿಂದೆ ಅಷ್ಟೊಂದು ಸಮಸ್ಯೆ ಇರಲಿಲ್ಲ. ಇತ್ತಿಚಿನ ದಿನಗಳಲ್ಲಿ ಹೆಚ್ಚಾಗಿದ್ದು, ತಪ್ಪು ಮಾಡಿದವರೇ ಪೊಲೀಸ್ ಠಾಣೆಗೆ ಮೊದಲು ದೂರು ಕೊಡಲಾಗುತ್ತಿದೆ. ತಪ್ಪು ಮಾಡದವರು ಹೆದರಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಕಿವಿಮಾತು ಹೇಳಿದರು.
ಸಮಸ್ಯೆ ಕಂಡು ಬಂದಾಗ ತಕ್ಷಣ ಬೀಟ್ ಪೊಲೀಸ್ ಪೇದೆಗೆ ಕರೆ ಮಾಡಿದರೇ ಸ್ಥಳಕ್ಕೆ ಬರುತ್ತಾರೆ. ಇದರಿಂದ ಶೀಘ್ರ ಇತ್ಯಾರ್ತವಾಗಲಿದೆ. ಇಲ್ಲು ಆಗದಿದ್ದರೇ ಸಭ್‌ಇನ್ಸ್‌ಪೆಕ್ಟರ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ ಎಂದರು. ಬೀಟ್ ವ್ಯವಸ್ಥೆ ಜಾರಿಗೆ ಬಂದ ಮೇಲೆ ಸಮಸ್ಯೆ ಸಲ್ಪವಾದರೂ ಕಡಿಮೆ ಆಗಿದೆ. ಬೀಟ್ ಸದಸ್ಯರು ಯಾವುದಕ್ಕೂ ಹೆದರದೆ ಪೊಲೀಸ್ ಠಾಣೆಗೆ ಮಾಹಿತಿ ಕೊಡಬೇಕು. ನೂರಕ್ಕೆ ನೂರರಷ್ಟು ನಿಮ್ಮ ರಕ್ಷಣೆಗೆ ನಾವು ಸದಾ ಸಿದ್ಧರಾಗಿರುತ್ತೇವೆ ಎಂದು ಭರವಸೆ ನುಡಿದರು.







