1,000 ಈಜಿಪ್ಟ್ ಸೈನಿಕರ ಕುಟುಂಬಿಕರಿಗೆ ಸೌದಿ ಆತಿಥ್ಯದ ಹಜ್

ಕೈರೋ, ಆ. 1: ತಮ್ಮ ತಾಯ್ನಡಿನ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ 1,000 ಈಜಿಪ್ಟ್ ಸೈನಿಕರ ಕುಟುಂಬಗಳು ಈ ಬಾರಿ ಸೌದಿ ಅರೇಬಿಯದ ದೊರೆ ಸಲ್ಮಾನ್‌ರ ಅತಿಥಿಗಳಾಗಿ ಹಜ್ ಯಾತ್ರೆ ನಡೆಸಲಿದ್ದಾರೆ ಎಂದು ಈಜಿಪ್ಟ್‌ಗೆ ಸೌದಿ ಅರೇಬಿಯದ ರಾಯಭಾರಿ ಅಹ್ಮದ್ ಬಿನ್ ಅಬ್ದುಲಝೀಝ್ ಕತ್ತನ್ ಹೇಳಿದ್ದಾರೆ.
ಈ ಅತಿಥಿಗಳು ಸುಲಲಿತವಾಗಿ ಹಜ್ ನಿರ್ವಹಿಸಲು ಸಾಧ್ಯವಾಗುವಂತೆ ಏರ್ಪಾಡುಗಳನ್ನು ಮಾಡಲು ಸಂಬಂಧಿಸಿದ ಸಂಸ್ಥೆಗಳಿಗೆ ದೊರೆ ಸೂಚನೆ ನೀಡಿದ್ದಾರೆ ಎಂದು ಅವರು ಹೇಳಿದರು.
Next Story





