‘ಹಿರಿಯ ನಾಗರಿಕರಿಗೆ ಆತ್ಮವಿಶ್ವಾಸ ಮೂಡಿಸುವ ಕಾರ್ಯಕ್ರಮ'

ಉಡುಪಿ, ಆ.1: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಉಡುಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಹಿರಿಯ ನಾಗರಿಕರ ಸಂಸ್ಥೆ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಿರಿಯ ನಾಗರಿಕರ ಸಂಸ್ಥೆ ಅಜ್ಜರಕಾಡು ಉಡುಪಿ ಇಲ್ಲಿ ‘ನೀವು ಒಬ್ಬಂಟಿಯಲ್ಲ’ ಎಂಬ ಧ್ಯೇಯವಾಕ್ಯ ದೊಂದಿಗೆ ಹಿರಿಯ ನಾಗರಿಕರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಹಿರಿಯ ಸಿವಿಲ್ ನ್ಯಾಯಾಧೀಶೆ ಲತಾ ಕಾರ್ಯಕ್ರಮವನ್ನು ಉದ್ಪಾಟಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಎ.ಪಿ.ಕೊಡಂಚ ಧ್ಯೇಯವಾಕ್ಯದ ಬಗ್ಗೆ ಹಿರಿಯ ನಾಗರಿಕರಿಗೆ ಮನವರಿಕೆ ಮೂಡಿಸಿ ಮಾತನಾಡಿ ಹಿರಿಯ ನಾಗರಿಕರಿಗೆ ಕಾನೂನು, ಆರೋಗ್ಯ, ರಕ್ಷಣೆ, ಸಂಚಾರ, ಆರ್ಥಿಕ ದ್ರತೆ ಮುಂತಾದ ಸೇವೆಗಳನ್ನು ನೀಡುವುದರ ಮೂಲಕ ಇಲಾಖೆ ಹಿರಿಯ ನಾಗರೀಕರ ಒಂಟಿತನವನ್ನು ಹೋಗಲಾಡಿಸಿ ಆತ್ಮವಿಶ್ವಾಸವನ್ನು ಮೂಡಿಸುವಲ್ಲಿ ಪ್ರಯತ್ನಶೀಲವಾಗಿದೆ ಎಂದು ವಿವರಿಸಿದರು.
ಸಿ.ಎಸ್.ರಾವ್ ಅಧ್ಯಕ್ಷತೆಯನ್ನು ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಎಲ್. ಗೊನ್ಸಾಲ್ವಿಸ್, ಉಡುಪಿ ವಕೀಲರ ಸಂಘದ ಅಧ್ಯಕ್ಷ ಹೆಚ್ ರತ್ನಾಕರ ಶೆಟ್ಟಿ, ನಿರಂಜನ ಭಟ್ ಉಪಸ್ಥಿತರಿದ್ದರು. ಬಾಲಕೃಷ್ಣ ನಾಯಕ್ ವಂದಿಸಿದರು. ಭುವನೇಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.
ಸಿ.ಎಸ್.ರಾವ್ ಪ್ರೆಸಿಎಲ್. ಗೊನ್ಸಾಲ್ವಿಸ್, ಉಡುಪಿ ವಕೀಲರ ಸಂಘದ ಅಧ್ಯಕ್ಷ ಹೆಚ್ ರತ್ನಾಕರ ಶೆಟ್ಟಿ, ನಿರಂಜನ ಭಟ್ ಉಪಸ್ಥಿತರಿದ್ದರು. ಬಾಲಕೃಷ್ಣ ನಾಯಕ್ ವಂದಿಸಿದರು.ಭುವನೇಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.







