ಪ್ರವಾಸಿ ಮಿತ್ರ ಕರ್ತವ್ಯಕ್ಕೆ ಗೃಹ ರಕ್ಷಕರು
ಉಡುಪಿ, ಆ.1: ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ದೇಶ ವಿದೇಶ ಗಳಿಂದ ಆಗಮಿಸುವ ಪ್ರವಾಸಿಗರ ಸುರಕ್ಷತೆ ಹಾಗೂ ರಕ್ಷಣೆಗೆ ಪ್ರವಾಸಿ ಮಿತ್ರ ಯೋಜನೆಯಡಿಯಲ್ಲಿ ಟೂರಿಸ್ಟ್ ಪೊಲೀಸ್ ಕರ್ತವ್ಯ ನಿರ್ವಹಿಸಲು ಒಟ್ಟು 20 ಗೃಹರಕ್ಷಕರಿಗೆ ಪ್ರವಾಸೋದ್ಯಮ ಇಲಾಖೆಯಲ್ಲಿ ತರಬೇತಿ ನೀಡಲಾಗಿದೆ. ಗೃಹ ರಕ್ಷಕದಳದ ಕೇಂದ್ರ ಕಚೇರಿಯ ಮಂಜೂರಾತಿ ಆದೇಶದಂತೆ 2017-18 ನೇ ಸಾಲಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಟೂರಿಸ್ಟ್ ಪೊಲೀಸ್ ಕರ್ತವ್ಯಕ್ಕೆ ಏಕಕಾಲದಲ್ಲಿ 10 ಮಂದಿ ಗೃಹರಕ್ಷಕರನ್ನು ಮಾತ್ರ ನಿಯೋಜಿಸ ಬೇಕಿದ್ದು, ಅದರಂತೆ 10 ಮಂದಿ ಗೃಹರಕ್ಷಕರನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಸರದಿ ಆಧಾರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುವುದು.
ಗೃಹ ರಕ್ಷಕ ದಳದ ಕೇಂದ್ರ ಕಚೇರಿಯ ನಿರ್ದೇಶನದಂತೆ ಅವರನ್ನು ತುರ್ತು ಸಂದರ್ಭದಲ್ಲಿ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸುವಂತೆ ಪೊಲೀಸ್ ಪ್ರಾಧಿಕಾರದಿಂದ ಕೋರಿಕೆ ಬಂದರೆ ಆದ್ಯತೆಯ ಮೇರೆಗೆ ಈ ಕರ್ತವ್ಯದಿಂದ ಹಿಂಪಡೆದು ಪೊಲೀಸರ ನೆರವಿಗೆ ನಿಯೋಜಿಸಲಾಗುವುದು ಎಂದು ಜಿಲ್ಲಾ ಕಮಾಂಡೆಂಟ್ ಡಾ.ಪ್ರಶಾಂತ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





