ಉಡುಪಿ, ಆ.1: ಈವರೆಗೆ ಬನ್ನಂಜೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಂದರು ಮತ್ತು ಮೀನುಗಾರಿಕಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಕಚೇರಿಯ ಜಾಗದಲ್ಲಿ ಕ.ರಾ.ರ.ಸಾ.ಸಂಸ್ಥೆಯ ಬಸ್‌ನಿಲ್ದಾಣ ನಿರ್ಮಾಣಗೊಳ್ಳಲಿ ರುವುದರಿಂದ ಈ ಕಚೇರಿಯನ್ನು ಅಂಬಲಪಾಡಿಯ ಶ್ಯಾಮಿಲಿ ಕಟ್ಟಡದ 2ನೇ ಮಹಡಿಗೆ ಸ್ಥಳಾಂತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.