‘ಕಾವ್ಯ ಆತ್ಮಹತ್ಯೆ: ಸತ್ಯಾಂಶ ಜನತೆಯ ಮುಂದಿಡಿ’
ಉಡುಪಿ, ಆ.1: ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಹಾಸ್ಟೆಲ್‌ನಲ್ಲಿ ಇತ್ತೀಚೆಗೆ ನಡೆದ ಪ್ರತಿಭಾವಂತ ವಿದ್ಯಾರ್ಥಿನಿ ಕಾವ್ಯಾಳ ಆತ್ಮಹತ್ಯೆ ಪ್ರಕರಣದ ಸುತ್ತ ಹತ್ತು ಹಲವು ಅನುಮಾನಗಳ ಹುತ್ತ ಬೆಳೆಯುತಿದ್ದು, ಸಮಾಜದ ಸ್ವಾಸ್ಥ ವನ್ನು ಕೆಡಿಸುತ್ತಿದೆ. ಆದುದರಿಂದ ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಯಾವುದೇ ಪ್ರಭಾವಕ್ಕೂ ಒಳಗಾಗದೇ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಂಶವನ್ನು ಇನ್ನೂ ವಿಳಂಬಿಸದೇ ಜನತೆಯ ಮುಂದಿಡಬೇಕು ಎಂದು ತುಳುನಾಡ ಒಕ್ಕೂಟದ ಅಧ್ಯಕ್ಷ ಐಕಳ ಬಾವ ಚಿತ್ತರಂಜನ್ ದಾಸ್ ಶೆಟ್ಟಿ ಆಗ್ರಹಿಸಿದ್ದಾರೆ.
Next Story





