6ನೆ ವೇತನ ಆಯೋಗ ಜಾರಿ ಮಾಡಲು ಡಿ’ನೌಕರರ ಸಂಘದಿಂದ ಒತ್ತಾಯ

ಮಂಗಳೂರು ಆ.1: 6ನೇ ವೇತನ ಆಯೋಗ ಶೀಘ್ರದಲ್ಲೆ ಮಂಜೂರು ಮಾಡುವಂತೆ ಮುಖ್ಯಮಂತ್ರಿಯವರಿಗೆ ಶಿಫಾರಸು ಮಾಡಬೇಕೆಂದು ಆಗ್ರಹಿಸಿ ದ.ಕ. ಜಿಲ್ಲಾ ಡಿ’ವರ್ಗ ಸರಕಾರಿ ನೌಕರರ ಸಂಘದ ವತಿಯಿಂದ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಅವರಿಗೆ ಮನವಿ ಸಲ್ಲಿಸಲಾಯಿತು.
ಉರ್ವಸ್ಟೋರ್‌ನ ತುಳುಭವನ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿದ ರಕ್ತದಾನ, ಆರೋಗ್ಯ-ತಪಾಸಣೆ, ನೇತ್ರ-ತಪಾಸಣೆ, ದಂತ-ತಪಾಸಣೆ, ಆಯುಷ್ ಚಿಕಿತ್ಸೆ ಮತ್ತು ಉಚಿತ ಔಷಧಿ ವಿತರಣೆ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು ಈ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಉರ್ವಾಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷಸುರೇಂದ್ರರಾವ್ ನೇರವೇರಿಸಿದರು. ಮುಖ್ಯ ಅಥಿತಿಗಳಾಗಿ ಅಶೋಕನಗರ ಸೈಂಟ್ ಡೋಮೆನಿಕ್ ಚರ್ಚ್‌ನ ಧರ್ಮಗುರು ಫಾ.ಎಕ್ವಿನ್ ನೊರಾನ್ಹ್, ದ.ಕ. ಜಿಲ್ಲಾ ರೆಡ್‌ಕ್ರಾಸ್‌ಅಧ್ಯಕ್ಷ ಡಾ.ಸುಶೀಲ್ ಜತ್ತನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ರಾವ್ ಎಂ., ಜಿಲ್ಲಾ ವೆನ್ಲಾಕ್ ಸರಕಾರಿ ಆಸ್ಪತ್ತೆಯ ಡಾ.ರಾಜೇಶ್ವರಿ ದೇವಿ.ಎಚ್, ಸವಸ್ತ ಸರಕಾರಿ ನೌಕರರ ಸಂಘದ ಸದಸ್ಯರು, ಸಾರ್ವಜನಿಕರು ಭಾಗವಹಿಸಿ ರಕ್ತದಾನ, ನೇತ್ರ ತಪಾಸಣೆ, ಆಯುಷ್ ತಪಾಸಣೆ, ಉಚಿತ ಔಷಧಿ, ದಂತ ಚಿಕಿತ್ಸೆ, ಆರೋಗ್ಯ ತಪಾಸಣೆಯ ಪ್ರಯೋಜನವನ್ನು ಪಡೆದರು.
ಸುಮಾರು 600ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಸತತ 30 ಬಾರಿ ರಕ್ತದಾನ ಮಾಡಿರುವ ಬಂಟ್ವಾಳ ತಾಲೂಕು ಆರೋಗ್ಯ ಕೇಂದ್ರದ ವಾಹನ ಚಾಲಕ ಲಕ್ಷಣ ಗೌಡ, ಜಿ.ಪಂ. ಮೀನುಗಾರಿಕೆ ಇಲಾಖೆಯ ವಾಹನ ಚಾಲಕ ಯೋಗಿಶ್, ಜಿ.ಪಂ. ಉಪಾಧ್ಯಕ್ಷರ ಶಾಖೆಯ ಆಪ್ತ ಸಹಾಯಕ ಉದಯ ರವಿ ಅವರನ್ನು ಸನ್ಮಾನಿಸಲಾಯಿತು.







