ರಾಷ್ಟಧ್ವಜದ ಬಗ್ಗೆ ಮಾಹಿತಿ
ಮಂಗಳೂರು ಆ.1: ಮೇರಿಹಿಲ್‌ನ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ಆ.3ರಂದು ಬೆಳಗ್ಗೆ 7 ಗಂಟೆಯಿಂದ 7:45ರವರೆಗೆ ಕವಾಯತು ಹಾಗೂ 7:45 ರಿಂದ 8:30 ರವರೆಗೆ ಲಯನ್ಸ್ ಹಾಗೂ ಲಯನೆಸ್ ಕ್ಲಬ್ ಇವರ ಸಹಯೋಗದೊಂದಿಗೆ ಭಾರತ ಸೇವಾದಳದ ಸದಸ್ಯರಾದ ಅಲ್ಫೋನ್ಸ್ ಫ್ರಾಂಕೋ ಹಾಗೂ ಭಾರತ ಸೇವಾದಳದ ಉಡುಪಿ ಜಿಲ್ಲಾ ಸಂಯೋಜಕ ಮಹೇಶ್ ಎನ್. ರಾಷ್ಟಧ್ವಜದ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಗೃಹರಕ್ಷಕರು ಭಾಗವಹಿಸಬೇಕಾಗಿ ಗೃಹರಕ್ಷಕ ದಳದ ಕಮಾಂಡೆಂಟ್ ಡಾ.ಮುರಲೀ ಮೋಹನ್ ಚೂಂತಾರು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





