ದಹಿ ಹಂಡಿ: ಮನವಿ ವಿಚಾರಣೆ ನಡೆಸಿ

ಸುಪ್ರೀಂ ಕೋರ್ಟ್ ಹೈಕೋರ್ಟ್‌ಗೆ ಮುಂಬೈ, ಆ.1: (ದಹಿ ಹಂಡಿ)ಜನಪ್ರಿಯ ಮೊಸರು ಕುಡಿಕೆಯಲ್ಲಿ ಮಾನವ ಗೋಪುರದ ಎತ್ತರವನ್ನು ಇಳಿಸುವುದು ಹಾಗೂ ಅಪ್ರಾಪ್ತರು ಭಾಗವಹಿಸುವುದನ್ನು ನಿಷೇಧಿಸಿ ಮುಂಬೈ ಉಚ್ಚ ನ್ಯಾಯಾಲಯ ತೀರ್ಪು ನೀಡಿದ್ದು, ಈ ತೀರ್ಪನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ಆದರೆ, ಈ ಮನವಿಯ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಮುಂಬೈ ಉಚ್ಚ ನ್ಯಾಯಾಲಯಕ್ಕೆ ಸೂಚಿಸಿದೆ.
ಮಾನವ ಗೋಪುರ ರಚನೆ ಸಂದರ್ಭ ಅನೇಕ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಆದುದರಿಂದ ಎತ್ತರ ನಿಯಂತ್ರಣ ಸಡಿಲಿಸಬೇಕು ಎಂದು ಕೋರಿ ರಾಜ್ಯ ಸರಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು.
ಮಹಾರಾಷ್ಟ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಸಂದರ್ಭ ನಡೆಯುವ ಮೊಸರು ಕುಡಿಕೆಯಲ್ಲಿ 18 ವರ್ಷ ಕೆಳಗಿನವರು ಭಾಗವಹಿಸಬಾರದು ಹಾಗೂ ಮಾನವ ಗೋಪುರದ ಎತ್ತರವನ್ನು 20 ಅಡಿಗಿಂತ ಮೇಲೇರದಂತೆ ನಿರ್ಬಂದ ವಿಧಿಸಿ ತೀರ್ಪು ನೀಡಿತ್ತು.
ಆದರೆ, ಉತ್ಸವದ ಸಂದರ್ಭದ ಸಾಹಸ ಕ್ರೀಡೆಯಾದ ಮಾನವ ಗೋಪುರದ ಎತ್ತರ ನಿಯಂತ್ರಿಸುವಂತೆ ನೀಡಿದ ಆದೇಶ ಮಾರ್ಪಾಡು ಮಾಡುವಂತೆ ಹಲವು ಸಂಘಟನೆಗಳು ಕೋರಿದ್ದವು.





