ರೋಗಿಯ ಚಿಕಿತ್ಸೆಗೆ ನೆರವು ನೀಡಲು ಮನವಿ

ಮಂಗಳೂರು ಆ.1: ಕಳೆದ ಕೆಲವು ವರ್ಷಗಳಿಂದ ಎರಡೂ ಕಿಡ್ನಿ ವೈಫಲ್ಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಬೇಲೂರಿನ ಚಿಕ್ಕಬ್ಯಾಡಿಗೆರ ನಿವಾಸಿ ರವಿಚಂದ್ರ ಎಂಬವರ ವೈದ್ಯಕೀಯ ವೆಚ್ಚಕ್ಕಾಗಿ ಅವರ ಪತ್ನಿ ಮೀನಾಕ್ಷಿ ದಾನಿಗಳ ನೆರವು ಕೋರಿದ್ದಾರೆ.
ಕಳೆದ ಮೂರು ವರ್ಷಗಳಿಂದ ಆಸ್ಪತ್ರೆಯಲ್ಲಿ ಎರಡೂ ಕಿಡ್ನಿಗೆ ಡಯಾಲಿಲಿಸ್ ಮಾಡಿ ಇದೀಗ ಹಣವಿಲ್ಲದೆ ಮನೆಯಲ್ಲೇ ಉಳಿದುಕೊಂಡಿದ್ದು, ವಾರಕ್ಕೆ ಎರಡು ಬಾರಿ ಡಯಾಲಿಲಿಸ್‌ನ ಅವಶ್ಯಕತೆ ಇರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಮೀನಾಕ್ಷಿ ಹೇಳಿದ್ದಾರೆ.ಎರಡು ಮಕ್ಕಳ ತಂದೆಯಾಗಿರುವ ರವಿಚಂದ್ರರಿಗೆ ಲಿವರ್ ಸಮಸ್ಯೆ ಕಾಡುತ್ತಿದ್ದು, ಈ ಎಲ್ಲಾ ವೆಚ್ಚಕ್ಕಾಗಿ ತಿಂಗಳಿಗೆ ಸುಮಾರು 20 ಸಾವಿರ ರೂ. ವರೆಗೆ ಖರ್ಚು ಇದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತೀರಾ ಬಡ ಕುಟುಂಬದಿಂದ ಬಂದಿರುವ ಈ ದಂಪತಿಗೆ ಇದೀಗ ವೈದ್ಯಕೀಯ ಖರ್ಚು ಭರಿಸಲು ಹಣ ಇಲ್ಲದೆ ದಾನಿಗಳ ಮೊರೆ ಹೋಗಿದ್ದಾರೆ. ಸಹಾಯ ಮಾಡಲಿಚ್ಛಿಸುವವರು ರವಿಚಂದ್ರ ಅವರ ಪತ್ನಿ ಮೀನಾಕ್ಷಿ ಅವರ ಕೆನರಾ ಬ್ಯಾಂಕ್‌ನ ಖಾತೆ ಸಂಖ್ಯೆ 0525101037893 (ಐಎಫ್‌ಎಸ್‌ಸಿ ಕೋಡ್ ಸಂಖ್ಯೆ ಸಿಎನ್‌ಆರ್‌ಬಿ 0000525)ಗೆ ಹಣವನ್ನು ಜಮಾ ಮಾಡುವಂತೆ ಅವರು ಮನವಿ ಮಾಡಿದ್ದಾರೆ.





