ಕಲ್ಲಬೆಟ್ಟು : ಹೋಬಳಿ ಮಟ್ಟದ ಕಬಡ್ಡಿ ಪಂದ್ಯಾಟ

ಮೂಡುಬಿದಿರೆ,ಆ.2 : ಪುರಸಭಾ ವ್ಯಾಪ್ತಿಯ ಸರಕಾರಿ ಉನ್ನತೀಕರಿಸಿದ ಕಲ್ಲಬೆಟ್ಟು ಶಾಲೆಯಲ್ಲಿ ಮೂಡುಬಿದಿರೆ ಹೋಬಳಿ ಮಟ್ಟದ ಶಾಲಾ ಮಕ್ಕಳ ಕಬಡ್ಡಿ ಪಂದ್ಯಾಟವು ಬುಧವಾರ ನಡೆಯಿತು.
ಕಬಡ್ಡಿ ಪಂದ್ಯಾಟಕ್ಕೆ ಚಾಲನೆ ನೀಡಿದ ಎಪಿಎಂಸಿ ಸದಸ್ಯ ಜೊಸ್ಸಿ ಮಿನೇಜಸ್ "ಕ್ರೀಡೆಗಳು ದೈಹಿಕ ಮತ್ತು ಮಾನಸಿಕವಾಗಿ ವಿದ್ಯಾರ್ಥಿಗಳನ್ನು ಬಲಪಡಿಸುತ್ತವೆ. ಹಿಂದೆ ಗ್ರಾಮೀಣ ಮಟ್ಟದ ಕ್ರೀಡೆಯಾಗಿ ಗುರುತಿಸಿಕೊಂಡಿರುವ ಕಬಡ್ಡಿ ಇಂದು ರಾಷ್ಟ್ರಮಟ್ಟದಲ್ಲಿ ಗುರುತಿಕೊಂಡಿದೆ ಮುಂದಿನ ದಿನಗಳಲ್ಲಿ ಈ ಕ್ರೀಡೆಯು ಒಲಂಪಿಕ್ಸ್‍ಗೆ ಸೇರ್ಪಡೆಗೊಳ್ಳುವಂತಾಗಲಿ’ ಎಂದು ಶುಭ ಹಾರೈಸಿದರು.
ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ ಅಧ್ಯಕ್ಷತೆಯನ್ನು ವಹಿಸಿದ್ದು, ಉದ್ಯಮಿ ಆಲ್ವೀನ್ ಮಿನೇಜಸ್, ಸರಕಾರಿ ಶಾಲೆಗಳ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆಲಿದ್ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ವಿನಯ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಾಲಾ ಶಿಕ್ಷಕಿ ಅನಿತಾ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ದೈಹಿಕ ಶಿಕ್ಷಕಿ ಸುಮನಾ ಪೈ ವಂದಿಸಿದರು.
ಫಲಿತಾಂಶ : ಹೋಬಳಿ ಮಟ್ಟದ ಜ್ಯೋತಿನಗರ, ಕಲ್ಲಮುಂಡ್ಕೂರು, ಇರುವೈಲು ಮತ್ತು ಮೂಡುಬಿದಿರೆ ಮೈನ್ ಕ್ಲಸ್ಟರ್‍ನ 16 ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದು ಜ್ಯೋತಿನಗರ ಕ್ಲಸ್ಟರ್‍ನ ಬಾಲಕರ ವಿಭಾಗದಲ್ಲಿ ಕಲ್ಲಬೆಟ್ಟು ಪ್ರಥಮ, ಜ್ಯೋತಿನಗರ ದ್ವಿತೀಯ. ಬಾಲಕಿಯರ ವಿಭಾಗದಲ್ಲಿ ಕಲ್ಲಬೆಟ್ಟುವಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಥಮ, ಕಲ್ಲಬೆಟ್ಟು ದ್ವಿತೀಯ ಸ್ಥಾನವನ್ನು ಗಳಿಸಿದೆ.
ಕಲ್ಲಮುಂಡ್ಕೂರು ಕ್ಲಸ್ಟರ್‍ನ ಬಾಲಕರ ವಿಭಾಗದಲ್ಲಿ ಡಿ.ಜೆ ಸ್ಕೂಲ್ (ಪ್ರಥಮ), ಮಿಜಾರು (ದ್ವಿತೀಯ). ಬಾಲಕಿಯರ ವಿಭಾಗದಲ್ಲಿ ಅಶ್ವತ್ಥಪುರ (ಪ್ರಥಮ), ಮಿಜಾರು ಶಾಲೆ ದ್ವಿತೀಯ ಸ್ಥಾನವನ್ನು ಗಳಿಸಿದೆ.







