ಗೋಮೂತ್ರದಿಂದ ಕಾಯಿಲೆ ದೂರ : ಬಿಜೆಪಿ ಸಂಸದೆಯ ಹೇಳಿಕೆ

ಹೊಸದಿಲ್ಲಿ, ಆ.2: ಗೋಮೂತ್ರವು ಬಹೂಪಯೋಗಿಯಾಗಿದ್ದು ಇದರ ಸೇವನೆಯಿಂದ ಸರಕಾರದ ಮಾಜಿ ಅಧಿಕಾರಿಯೋರ್ವರು ಕಾಯಿಲೆಯಿಂದ ಗುಣಮುಖರಾಗಿದ್ದಾರೆ ಎಂದು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಹೇಳಿದ್ದಾರೆ.
ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಮೀನಾಕ್ಷಿ, ಅಸೌಖ್ಯದಿಂದಿದ್ದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಓರ್ವರು ಗೋಮೂತ್ರ ಸೇವನೆಯ ಬಳಿಕ ಚೇತರಿಸಿಕೊಂಡಿದ್ದಾರೆ ಎಂದು ಹೇಳಿದರು. ಆಧುನಿಕ ವಿಧಾನಗಳನ್ನು ಬಳಸಿಕೊಂಡು ಗೋವು ಮತ್ತು ಪಶುಗಳ ಕುರಿತ ಪ್ರಾಚೀನ ಅಧ್ಯಯನಗಳನ್ನು ಪ್ರಸಾರ ಮಾಡಲು ಸರಕಾರ ಕ್ರಮ ಕೈಗೊಂಡಿದೆಯೇ ಎಂದವರು ಪ್ರಶ್ನಿಸಿದರು. ಔಷಧ ಯಾವಾಗಲೂ ಔಷಧವೇ ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ಈ ಸಂದರ್ಭ ನುಡಿದರು.
Next Story





