ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಣೆ

ದಾವಣಗೆರೆ, ಆ,2: ಐಟಿ ದುರ್ಬಳಕೆ ಮಾಡಿಕೊಂಡಿರುವ ಕೇಂದ್ರ ಸರ್ಕಾರದ ವಿರುದ್ಧ ದಾವಣಗೆರೆ ದಕ್ಷಿಣ ಯುವ ಕಾಂಗ್ರೆಸ್ ಸಮಿತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಹಾಸಭಾವಿ ವೃತ್ತದಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಅಧ್ಯಕ್ಷ ಮೊಹಮ್ಮದ್ ಸಾಧಿಕ್ ಮಾತನಾಡಿ, ಗುಜರಾತಿನಲ್ಲಿ ರಾಜ್ಯಸಭಾ ಚುನಾವಣೆಯ ಬಿಸಿ ದಿನದಿಂದ ದಿನಕ್ಕೆ ಏರುತ್ತಿದ್ದು, ಈ ಹಿನ್ನಲೆಯಲ್ಲಿ ಅಲ್ಲಿನ ಆಡಳಿತಾರೂಢ ಬಿಜೆಪಿ ಕುದುರೆ ವ್ಯಾಪಾರ ಶುರು ಮಾಡಿದೆ. ವ್ಯಾಪಾರಕ್ಕೆ ಒಪ್ಪದ ಕಾಂಗ್ರೆಸ್ ಶಾಸಕರಿಗೆ ಬೆದರಿಕೆ, ಆಮಿಷಗಳು ಬಂದಿದ್ದು, ಆದ್ದರಿಂದ ಶಾಸಕರು ಬೆಂಗಳೂರಿಗೆ ವಲಸೆ ಬಂದಿದ್ದಾರೆ.
ರಕ್ಷಣೆಗೆ ಇಲ್ಲಿನ ಸಚಿವರು, ಪ್ರಭಾವಿ ಶಾಸಕರ ಕೈ ಹಾಕಿದರೆ ಅವರ ಮನೆಗಳ ಮೇಲೆ ಸಿಬಿಐ ದಾಳಿ, ಐಟಿ ದಾಳಿ ಸೇರಿದಂತೆ ಹಲವು ಬೆದರಿಕೆಗಳು ಬಂದಿವೆ. ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮನೆಯ ಮೇಲೆ ಐಟಿ ದಾಳಿ ನಡೆದಿದೆ. ಇದಕ್ಕೆ ಕಾರಣ ಕೇಂದ್ರ ಸರ್ಕಾರ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಎಚ್.ಜೆ. ಮೈನುದ್ದೀನ್, ನವೀದ್, ಸೈಯದ್ ಕಬೀರ್, ಜಾವೀದ್, ಸಂದೀಪ್, ಶರ್ಪುದ್ದೀನ್, ಸಾಧಿಕ್ ಖಾನ್, ಲಿಯಾಜ್, ಸಂತೋಷ್, ಸುಹೀಲ್ ಇಫ್ತೆಖಾರ್ ಮತ್ತಿತರರು ಇದ್ದರು







