ಗ್ರಾಪಂಗಳ ಕಾರ್ಯ ಅತಿ ಮಹತ್ವದಿಂದ ಕೂಡಿದೆ: ಬಿ.ಬಿ.ನಿಂಗಯ್ಯ

ಮೂಡಿಗೆರೆ, ಆ.2: ಗ್ರಾಮಗಳಲ್ಲಿ ಅಭಿವೃದ್ದಿಗೆ ಗ್ರಾಮ ಪಂಚಾಯತ್ ಸದಸ್ಯರು ಪಕ್ಷಬೇಧ ಮರೆತು ಕೆಲಸ ಮಾಡುವುದರಿಂದ ರಾಜಕೀಯ ಸೌಹಾರ್ದತೆ ಸಾದ್ಯ ಎಂದು ಶಾಸಕ ಬಿ.ಬಿ.ನಿಂಗಯ್ಯ ತಿಳಿಸಿದರು.
ಅವರು ಬುಧವಾರ ತಾಲೂಕಿನ ನಂದಿಪುರ ಗ್ರಾಮದಲ್ಲಿ ನಡೆದ ರಾಜೀವ್ ಗಾಂಧಿ ಸೇವಾ ಕೇಂದ್ರ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಗ್ರಾಪಂ ಗಳ ಕಾಂರ್ ಅತಿ ಮಹತ್ವದಿಂದ ಕೂಡಿದೆ. ಕುಡಿಯುವ ನೀರು, ವಸತಿ, ನೈರ್ಮಲ್ಯ ಇವುಗಳ ಬಗ್ಗೆ ಹೆಚ್ಚು ಗಮನ ನೀಡಬೇಕು ಎಂದು ತಿಳಿಸಿದರು.
ಎಂಎಲ್‌ಸಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಬಡವರು, ಹಿಂದುಳಿದವರು ಮತ್ತು ಶ್ರಮಿಕರ ಎಳಿಗೆಗೆ ಅನುವು ಮಾಡಿಕೊಡಬೇಕು. ಗುಡಿಸಲು ಮುಕ್ತ, ಸ್ವಚ್ಚ ಗ್ರಾಮ ನಿರ್ಮಾಣಕ್ಕೆ ಗಮನ ಹರಿಸಬೇಕು. ಕ್ರೂಡಿಕರಿಸಿದ ಸಂಪನ್ನೂಲವನ್ನು ಪಾರದರ್ಶಕವಾಗಿ ವೀನಿಯೋಗಿಸುವ ಮೂಲಕ ಗ್ರಾಪಂ ನಲ್ಲಿ ಪಾರದರ್ಶಕ ಅಡಳಿತ ಜಾರಿಗೆ ತರಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಾಪಂ ಅದ್ಯಕ್ಷ ಕೆ.ಸಿ.ರತನ್, ಗ್ರಾಪಂ ಅಧ್ಯಕ್ಷ ಮಾಲಹಳ್ಳಿ ರಮೇಶ್, ಉಪಾದ್ಯಕ್ಷೆ ಸುಶೀಲಮ್ಮ, ಸದಸ್ಯರಾದ ಪ್ರಸನ್ನ, ಈರೇಗೌಡ, ಚಂದ್ರು, ಗೀತಾ, ಸೀತಮ್ಮ, ವೀಣಾ, ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ, ಗ್ರಾಮಸ್ಥರಾದ ಗಬ್ಬಳ್ಳಿ ಚಂದ್ರೇಗೌಡ, ಗೌತಮ್, ಪಿಡಿಓ ಪರಮೇಶ್ ಉಪಸ್ಥಿತರಿದ್ದರು.





