ಆಯುಷ್ ಇಲಾಖೆುಂದ ಸ್ತನ್ಯಪಾನ ಜನಜಾಗೃತಿ ಸಪ್ತಾಹ
ಮಂಗಳೂರು, ಆ. 2: ಅಪೌಷ್ಟಿಕತೆಯಿಂದ ಅನಾರೋಗ್ಯ ಪೀಡಿತರಾಗುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡಲು ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ‘ಸ್ತನ್ಯಪಾನ ಜನಜಾಗೃತಿ ಸಪ್ತಾಹ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆಗಸ್ಟ್ ಮೊದಲ ವಾರ ವಿಶ್ವದಾದ್ಯಂತ ‘ಎಲ್ಲರೂ ಸ್ತನ್ಯಪಾನವನ್ನು ಉತ್ತೇಜಿಸೋಣ’ಎನ್ನುವ ಧ್ಯೇಯವಾಕ್ಯದಡಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಆಯುರ್ವೇದಾದಿ ಆಯುಷ್ ವೈದ್ಯ ಪದ್ಧತಿಗಳಲ್ಲಿ ಈ ಬಗ್ಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು ಅವುಗಳ ಸಂಪೂರ್ಣ ಪ್ರಯೋಜನವನ್ನು ಹಾಲುಣಿಸುವ ಮಾತೆಯರಿಗೆ ಕಲ್ಪಿಸುವುದು ಹಾಗೂ ಆರೋಗ್ಯಪೂರ್ಣ ಸ್ತನ್ಯಪಾನದ ಮೂಲಕ ಅಪೌಷ್ಟಿಕತೆ ಮುಕ್ತ ಸಮಾಜದ ಗುರಿ ಹೊಂದಲಾಗಿದೆ. ಗರ್ಭಿಣಿ, ಬಾಣಂತಿಯರ ಆರೋಗ್ಯ ರಕ್ಷಣೆಗೆ ಉಪಯುಕ್ತ ಮಾಹಿತಿ ನೀಡುವ ಮೂಲಕ ಔಚಿತ್ಯಪೂರ್ಣವಾಗಿ ಸಪ್ತಾಹ ಆಚರಿಸಲಾಗುತ್ತದೆ.
ಆಯುಷ್ ಇಲಾಖೆಯ ಎಲ್ಲಾ ಚಿಕಿತ್ಸಾಲಯ, ಆಸ್ಪತ್ರೆಗಳಲ್ಲಿ ಆಯುಷ್ ಇಲಾಖೆಯ ವತಿಯಿಂದ ಸ್ತನ್ಯಪಾನ ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





