ಅಪಘಾತದಲ್ಲಿ ಮಹಿಳೆ ಸಾವು
ಮಡಿಕೇರಿ, ಆ.2: ಜೀಪು ಹಾಗೂ ಓಮ್ನಿ ಪರಸ್ಪರ ಡಿಕ್ಕಿಯಾದ ಪರಿಣಾಮ ಜೀಪಿನಲ್ಲಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.
ಗರಗಂದೂರು ಮಲ್ಲಿಕಾರ್ಜುನ ಕಾಲೋನಿ ನಿವಾಸಿ ದಿವಗಂತ ಮಾಯಿಲ ಅವರ ಪತ್ನಿ ನೀಲು (60) ಅವರೇ ಸಾವನ್ನಪ್ಪಿದ ದುರ್ದೈವಿ.
ಮಲ್ಲಿಕಾರ್ಜುನ ಕಾಲೋನಿಯಿಂದ ಮಾದಾಪುರ ಕಡೆಗೆ ಜೀಪಿನಲ್ಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದಾಗ ಮಾದಾಪುರ ಪೆಟ್ರೋಲ್ ಬಂಕ್ ಬಳಿ ಮಾರುತಿ ವ್ಯಾನ್ ಎದುರಾಗಿದ್ದು, ಈ ವಾಹನಗಳೆರಡು ಪರಸ್ಪರ ಡಿಕ್ಕಿಯಾಗಿವೆ. ಈ ಸಂದರ್ಭ ಜೀಪಿನಲ್ಲಿದ್ದ ನೀಲು ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಂಾಗದೆ ಅವರು ಸಾವನ್ನಪ್ಪಿದ್ದಾರೆ.
ಜೀಪಿನಲ್ಲಿದ್ದ ಇನ್ನೋರ್ವ ಮಹಿಳೆ ಮಡಿಕೇರಿ ಜಿಲ್ಲಾ ಸಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
Next Story





