ಚೀನಾ ಕಾನ್ಸುಲೇಟ್‌ನತ್ತ ಗುಂಡು ಹಾರಿಸಿದ, ಬಳಿಕ ಆತ್ಮಹತ್ಯೆ ಮಾಡಿಕೊಂಡ

ಲಾಸ್ ಏಂಜಲಿಸ್, ಆ. 2: ಓರ್ವ ವ್ಯಕ್ತಿ ಸೋಮವಾರ ಲಾಸ್ ಏಂಜಲಿಸ್‌ನಲ್ಲಿರುವ ಚೀನಾ ಕಾನ್ಸುಲೇಟ್ ಕಚೇರಿಯತ್ತ ಗುಂಡು ಹಾರಿಸಿದನು ಹಾಗೂ ಬಳಿಕ ಆತ್ಮಹತ್ಯೆ ಮಾಡಿಕೊಂಡನು ಎಂದು ಪೊಲೀಸರು ತಿಳಿಸಿದರು.
ಬೆಳಗ್ಗೆ 6 ಗಂಟೆಗೆ ನಡೆದ ಘಟನೆಯಲ್ಲಿ ಬೇರೆ ಯಾರೂ ಗಾಯಗೊಂಡಿಲ್ಲ ಎಂದು ಲಾಸ್ ಏಂಜಲಿಸ್ ಪೊಲೀಸ್ ಇಲಾಖೆ ತಿಳಿಸಿದೆ.
ಚೀನಾ ಕಾನ್ಸುಲೇಟ್‌ನತ್ತ ಹಲವಾರು ಗುಂಡುಗಳನ್ನು ಹಾರಿಸಲಾಗಿದೆ ಎಂದು ಅದು ಹೇಳಿದೆ.
ಬಳಿಕ, ಪಕ್ಕದಲ್ಲಿರುವ ತನ್ನ ಕಾರಿನಲ್ಲಿ ಆತ ಸ್ವತಃ ಹಾರಿಸಿಕೊಂಡ ಗುಂಡಿನಿಂದ ಮೃತಪಟ್ಟಿರುವುದು ಪತ್ತೆಯಾಯಿತು ಎಂದಿದೆ.
Next Story





