ಅಪಘಾತ: ದಂಪತಿ ಸಹಿತ ನಾಲ್ವರಿಗೆ ಗಾಯ

ಗಂಗೊಳ್ಳಿ, ಆ.2: ತ್ರಾಸಿಯ ಅಂಡರ್‌ಪಾಸ್ ಬಳಿ ಆ.1ರಂದು ಮಧ್ಯಾಹ್ನ ವೇಳೆ ಎರಡು ದ್ವಿಚಕ್ರ ವಾಹನಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ದಂಪತಿ ಸಹಿತ ಮೂವರು ಗಾಯಗೊಂಡಿದ್ದಾರೆ.
ಹೊಸಾಡು ಬಾಜಿ ಮಕ್ಕಿಯ ಗೋಪಾಲ ಆಚಾರ್ಯ ಬೈಕಿನಲ್ಲಿ ತನ್ನ ಪತ್ನಿ ಜೊತೆ ತ್ರಾಸಿಯಿಂದ ಮನೆ ಕಡೆಗೆ ಹೋಗುತ್ತಿರುವಾಗ ಕಮ್ಮಾರ ಕೊಡ್ಲು ಕ್ರಾಸ್ ರಸ್ತೆಯಿಂದ ಬರುತ್ತಿದ್ದ ಸ್ಕೂಟರ್ ಢಿಕ್ಕಿ ಹೊಡೆಯಿತು. ಇದರಿಂದ ದಂಪತಿ ಹಾಗೂ ಸ್ಕೂಟರ್ ಸವಾರ ಕೇಶವ ಮತ್ತು ಸಹಸವಾರ ಜಗದೀಶ ಎಂಬವರು ಗಾಯಗೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





