ನೂತನ ಎಫ್‌ಬಿಐ ಮುಖ್ಯಸ್ಥ ನೇಮಕ: ಸೆನೆಟ್ ಅನುಮೋದನೆ

ವಾಶಿಂಗ್ಟನ್, ಆ. 2: ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐಯ ನೂತನ ಮುಖ್ಯಸ್ಥರಾಗಿ ಕ್ರಿಸ್ಟೋಫರ್ ರೇ ನೇಮಕವನ್ನು ಸೆನೆಟ್ ಮಂಗಳವಾರ ಭರ್ಜರಿ ಬಹುಮತದಿಂದ ಅನುಮೋದಿಸಿದೆ.
ಅವರು ಜೇಮ್ಸ್ ಕಾಮಿ ಸ್ಥಾನದಲ್ಲಿ ನೇಮಕಗೊಂಡಿದ್ದಾರೆ.
2016ರ ಅಮೆರಿಕ ಚುನಾವಣೆಯಲ್ಲಿ ರಶ್ಯದ ಹಸ್ತಕ್ಷೇಪದ ಬಗ್ಗೆ ತನಿಖೆ ನಡೆಸುತ್ತಿದ್ದ ನಿರ್ಗಮನ ಮುಖ್ಯಸ್ಥ ಜೇಮ್ಸ್ ಕಾಮಿಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಠಾತ್ತನೆ ಉಚ್ಚಾಟಿಸಿರುವುದನ್ನು ಸ್ಮರಿಸಬಹುದಾಗಿದೆ.
ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲು. ಬುಶ್‌ರ ಆಡಳಿತದಲ್ಲಿ ಉನ್ನತ ಅಧಿಕಾರಿಯಾಗಿದ್ದ 50 ವರ್ಷದ ರೇ ನೇಮಕವನ್ನು ಸೆನೆಟ್ 92-5 ಮತಗಳ ಅಂತರದಿಂದ ಅಂಗೀಕರಿಸಿತು.
Next Story





