ಕಲ್ಮನೆ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಮಂಜಪ್ಪ ದ್ಯಾವಿನಕೆರೆ ಅವಿರೋಧ ಆಯ್ಕೆ

ಶಿಕಾರಿಪುರ, ಆ.2: ತಾಲೂಕಿನ ಕಲ್ಮನೆ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಂಜಪ್ಪ ದ್ಯಾವಿನಕೆರೆ ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
11 ಸದಸ್ಯರನ್ನು ಹೊಂದಿರುವ ಗ್ರಾ.ಪಂ ಯಲ್ಲಿ ಸಂಪೂರ್ಣ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದು, ಎಸ್ಟಿ ಮೀಸಲು ಅಧ್ಯಕ್ಷ ಹುದ್ದೆಯಲ್ಲಿ ಸತತ 2 ವರ್ಷ ಅಧಿಕಾರ ನಡೆಸಿದ ದೇವೇಂದ್ರಪ್ಪ ಆಂತರಿಕ ಒಪ್ಪಂದದನ್ವಯ ನೀಡಿದ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಮಂಜಪ್ಪ ದ್ಯಾವಿನಕೆರೆ ಮಾತ್ರ ನಾಮಪತ್ರ ಸಲ್ಲಿಸಿದ್ದು, ಚುನಾವಣಾಧಿಕಾರಿ ಬಿಇಒ ಸಿದ್ದಪ್ಪ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಈ ಸಂದರ್ಬದಲ್ಲಿ ಉಪಾಧ್ಯಕ್ಷೆ ನಾಗರತ್ನಮ್ಮ ಬಡಿಗೇರ, ಸದಸ್ಯ ಗುಡ್ಡಳ್ಳಿ ಸುರೇಶ, ಈರಪ್ಪ, ಅನಿತಾ, ನೇತ್ರಾವತಿ, ದೇವಿಕಾ, ನಿಂಗಪ್ಪ ಎ.ಕೆ, ಗೀತಾ ಮಹದೇವಸ್ವಾಮಿ, ಕೋಕಿಲಾ ಶಿವಮೂರ್ತಿ ಸಹಿತ ಮುಖಂಡ ಕೆ.ಜಿ ಬಸಪ್ಪಯ್ಯ ಪಾಟೀಲ, ಕೆ.ರಾಮಪ್ಪ, ರುದ್ರೇಶ ಪಂಚಾಯತಿ ಅಭಿವೃದ್ದಿ ಅಧಿಕಾರಿ ಸಿ.ಸ್ವಾಮಿ ಮತ್ತಿತರರು ಹಾಜರಿದ್ದರು.
Next Story





