ಬಂಟ್ವಾಳ : ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ

ಬಂಟ್ವಾಳ, ಆ. 3: ರಾಜ್ಯ ಸರಕಾರ ಸಾಲಮನ್ನ ಮಾಡುವ ಮೂಲಕ ರೈತರಿಗೆ ಆರ್ಥಿಕ ನೆರವು ನೀಡಿದೆ. ಈ ಹಿಂದಿನ ಸರಕಾರ ಸಾಲಮನ್ನ ಮಾಡುವುದಾಗಿ ಘೋಷಿಸಿದ್ದರೂ ಅದರ ಹಣವನ್ನು ಬ್ಯಾಂಕುಗಳಿಗೆ ಪಾವತಿಸಿದ್ದು ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಸಂಗಬೆಟ್ಟು ಗ್ರಾಮ ಪಂಚಾಯತ್ ವತಿಯಿಂದ ಸಂಗಬೆಟ್ಟು ಮತ್ತು ಕರ್ಪೆ ಗ್ರಾಮಗಳ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಫಲಾನುಭವಿಹಗಳಿಗೆ 94ಸಿ ಯೋಜನೆಯಡಿ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವ ಚಿಂತನೆಯಿದೆ ಎಂದರು.
ಸಂಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿದೆ. ಮಳೆ ಮುಗಿದ ಬಳಿಕ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳು ಚಾಲನೆ ಪಡೆದುಕೊಳ್ಳಲಿವೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಗೇರು ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಎಪಿಎಂಸಿ ಸದಸ್ಯ ಪದ್ಮರಾಜ ಬಲ್ಲಾಳ್, ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಗುಲಾಬಿ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಪೂಜಾರಿ, ಸದಸ್ಯರಾದ ದೇವಪ್ಪ ಕರ್ಕೇರ, ಶೇಖರ ನ್ಯಾಕ್, ವಿಮಲ ಮೋಹನ್, ಸುಭಾಷಿನಿ, ಮಯ್ಯೆದಿ, ಶಾರದ, ಪ್ರಮುಖರಾದ ಜಗದೀಶ ಕ್ಯೊಲ, ಶಿವಾನಂದ ರೈ, ಸೀತರಾಮ ಶೆಟ್ಟಿ, ಆಶೋಕ ಆಚಾರ್ಯ, ವಾಮನ, ದೇವರಾಜ ಸಾಲ್ಯಾನ್, ಎಮ್.ಎಚ್ ಉಸ್ಮಾನ್, ಅಲ್ತಾಫ್ ಸಂಗಬೆಟ್ಟು, ಜಯಕರ ಶೆಟ್ಟಿ, ಭುಜಭಲಿ ಕಂಬಳಿ, ರವೀಂದ್ರ ನಾಯಾಕ್ ಮುಗೇರು ,ಗೋಪಾಲಕೃಷ್ಣ ಪ್ರಭು, ವಿನಯಕುಮಾರ್ ಜೈನ್, ಗ್ರಾಮಕರಣಿಕ ಜನಾರ್ಧನ, ಎಚ್ ಉಮ್ಮರ್ ಫಾರೂಕ್ ಮತ್ತು ವಿಜಯರಾಜ್ ಜೈನ್ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ನವೀನ್ ಸ್ವಾಗತಿಸಿ ತಾಪಂ ಸದಸ್ಯ ಪ್ರಭಾಕರ ಪ್ರಭು ನಿರೂಪಿಸಿ, ವಂದಿಸಿದರು.







