Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ‘ಜಿಎಸ್‌ಟಿ ಜಾಗೃತಿ-ರಿಟರ್ನ್ಸ್ ಅಪ್‌ಲೋಡ್...

‘ಜಿಎಸ್‌ಟಿ ಜಾಗೃತಿ-ರಿಟರ್ನ್ಸ್ ಅಪ್‌ಲೋಡ್ ಮತ್ತಿತರ ವಿಚಾರಗಳು’ ಕಾರ್ಯಕ್ರಮ

‘ದೇಶದಲ್ಲಿ ತೆರಿಗೆ ಪಾವತಿಸುವ ಜವಾಬ್ದಾರಿಯುತ ಸಮಾಜ ರೂಪುಗೊಳ್ಳಲಿ’

ವಾರ್ತಾಭಾರತಿವಾರ್ತಾಭಾರತಿ3 Aug 2017 7:06 PM IST
share
‘ಜಿಎಸ್‌ಟಿ ಜಾಗೃತಿ-ರಿಟರ್ನ್ಸ್ ಅಪ್‌ಲೋಡ್ ಮತ್ತಿತರ ವಿಚಾರಗಳು’ ಕಾರ್ಯಕ್ರಮ

ಮಂಗಳೂರು, ಆ.3: ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ ಜಾರಿಯಾಗುವ ಮೂಲಕ ಸುಧಾರಣೆ ಕಂಡು ಬಂದಿದೆ. ಈ ತೆರಿಗೆ ಕ್ರಮದಿಂದಾಗಿ ದೇಶದಲ್ಲಿ ಹೆಚ್ಚು ತೆರಿಗೆ ಪಾವತಿಸುವ ಜವಾಬ್ದಾರಿಯುತ ಸಮಾಜ ರೂಪುಗೊಳ್ಳಲಿ ಎಂದು ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್. ಹೇಳಿದರು.

ಕೆಸಿಸಿಐ ಸಭಾಂಗಣದಲ್ಲಿ ಗುರುವಾರ ನಡೆದ ‘ಜಿಎಸ್‌ಟಿ ಜಾಗೃತಿ-ರಿಟರ್ನ್ಸ್ ಅಪ್‌ಲೋಡ್ ಮತ್ತಿತರ ವಿಚಾರಗಳು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದಕ್ಷಿಣ ಭಾರತೀಯರು ಅಧಿಕ ತೆರಿಗೆ ಪಾವತಿಸುವ ಬಗ್ಗೆ ಒಲವು ಹೊಂದಿದ್ದಾರೆ. ಆದರೆ ಉತ್ತರ ಭಾರತದಲ್ಲಿ ಈ ಜಾಗೃತಿ ಕಡಿಮೆ ಇದೆ. ಇದರಲ್ಲಿ ಕೆಲವು ತೆರಿಗೆ ಸಲಹೆಗಾರರೂ ವ್ಯಾಪಾರಿಗಳನ್ನು ತೆರಿಗೆ ತಪ್ಪಿಸುವ ಬಗ್ಗೆ ಪ್ರಚೋದಿಸುತ್ತಾರೆ. ತೆರಿಗೆ ಯಾಕೆ ಪಾವತಿಸಬೇಕು ಎಂದು ಕೂಡ ಪ್ರಶ್ನಿಸುವವರಿದ್ದಾರೆ. ಇದೀಗ ಜಿಎಸ್‌ಟಿಯಿಂದಾಗಿ ಬಹಳಷ್ಟು ಸುಧಾರಣೆ ಕಂಡು ಬರಲಿದೆ. ದೇಶದ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ ಎಂದರು ಮಹಾಬಲೇಶ್ವರ ಎಂ.ಎಸ್. ಹೇಳಿದರು.

ಭಾರತೀಯ ರಿಸರ್ವ್ ಬ್ಯಾಂಕ್ ಜನರು ಮತ್ತು ಸಂಸ್ಥೆಗಳ ಸಾಲ ಶ್ರೇಯಾಂಕ (ಕ್ರೆಡಿಟ್ ಸ್ಕೋರ್) ರಿಜಿಸ್ಟ್ರಿ ಸ್ಥಾಪಿಸುವುದಾಗಿ ಹೇಳಿದೆ. ಇದರಿಂದಾಗಿ ವ್ಯಕ್ತಿಯೊಬ್ಬ ಸಾಲ ಪಡೆಯಲು ತನ್ನ ಹಿಂದಿನ ಸಾಲ ಮರುಪಾವತಿಯನ್ನು ಹೇಳಿಕೊಂಡು ಹೋಗಬೇಕಿಲ್ಲ. ಸಮಗ್ರವಾಗಿ ಆತನ ಸಾಲದ ಅರ್ಹತೆಯನ್ನು ಈ ರಿಜಿಸ್ಟ್ರಿ ನೀಡಲಿದೆ. ಇದು ಸಿಬಿಲ್(ಸಾಲ ಪಡೆಯುವ ಅರ್ಹತಾ ದರ)ಸ್ಕೋರ್‌ಗಿಂತಲೂ ಹೆಚ್ಚು ವೈಜ್ಞಾನಿಕವಾಗಿರಲಿದೆ ಎಂದ ಮಹಾಬಲೇಶ್ವರ, ಭಾರತೀಯ ರಿಸರ್ವ್ ಬ್ಯಾಂಕ್ ಕೂಡಾ 25 ಮೂಲಾಂಶಗಳಷ್ಟು ಕಡಿಮೆ ಮಾಡಿದೆ. ಇದು ದೇಶ ಸಾಗುವ ದಿಶೆಯನ್ನು ತೋರಿಸುತ್ತದೆ. ದೇಶವು ಸದ್ಯ ಉನ್ನತಿಯೆಡೆಗೆ ಸಾಗುತ್ತಿರುವುದು ಖಚಿತ. ಸಾಲದ ಬಡ್ಡಿದರ ಮತ್ತು ಠೇವಣಿ ಈ ಎರಡರ ಬಡ್ಡಿದರಗಳೂ ಇಳಿಕೆಯಾಗುವ ಸಾಧ್ಯತೆ ಇದೆ ಎಂದರು.

ವ್ಯಾಪಾರಿಗಳು ದೇಶದ ಯಾವುದೇ ಭಾಗದಲ್ಲೂ ಕಚ್ಚಾವಸ್ತು ಕಡಿಮೆ ದರದಲ್ಲಿ ಲಭ್ಯವಿದ್ದರೆ ತರುವುದಕ್ಕೆ ಜಿಎಸ್‌ಟಿ ಪದ್ಧತಿ ನೆರವಾಗುತ್ತದೆ. ಹಿಂದೆ ಹೊಸದೆಹಲಿಯಿಂದ ಮಂಗಳೂರಿಗೆ ವಸ್ತು ಸಾಗಾಟ ಮಾಡಲು ಲಾರಿಗಳಿಗೆ ಕೆಲವು ದಿನ ಬೇಕಾಗುತ್ತಿತ್ತು. ರಾಜ್ಯಗಳ ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿ ಸಾಲು ಗಟ್ಟಿ ನಿಲ್ಲಬೇಕಿತ್ತು. ಆದರೆ ಈಗ ಅದೆಲ್ಲವೂ ಹೋಗಿ ಎರಡು-ಮೂರು ದಿನದಲ್ಲಿ ಬರುವಂತಾಗಿದೆ ಎಂದು ಜಿಎಸ್‌ಟಿ ವಿಭಾಗದ ಜಂಟಿ ಆಯುಕ್ತ ಎಚ್.ಜಿ.ಪವಿತ್ರನ್ ನುಡಿದರು.

ವಾಣಿಜ್ಯ ತೆರಿಗೆ ಜಂಟಿ ಆಯುಕ್ತೆ (ಅಪೀಲು) ಕೆ.ಎಂ.ಸುಲೋಚನಾ, ಜಂಟಿ ಆಯುಕ್ತ (ಜಾರಿ) ಹೇಮಾಜಿ ನಾಯಕ್, ಕೆಸಿಸಿಐ ಉಪಾಧ್ಯಕ್ಷೆ ವಟಿಕಾ ಪೈ, ಖಜಾಂಚಿ ಗಣೇಶ್ ಭಟ್, ಕಾರ್ಯದರ್ಶಿ ಅಬ್ದುಲ್ ಹಮೀದ್ ಉಪಸ್ಥಿತರಿದ್ದರು. ಕೆಸಿಸಿಐ ಅಧ್ಯಕ್ಷ ಜೀವನ್ ಸಾಲ್ದಾನಾ ಸ್ವಾಗತಿಸಿದರು. ಕಾರ್ಯದರ್ಶಿ ಪ್ರವೀಣ್ ಕುಮಾರ್ ಕಲ್ಬಾವಿ ವಂದಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X