ಸಿದ್ಧರಾಮಯ್ಯ ಸರಕಾರದಿಂದ ಅಲ್ಪಸಂಖ್ಯಾತ ಇಲಾಖೆಗೆ ಹೆಚ್ಚಿನ ಅನುದಾನ :ಯು.ಟಿ.ಖಾದರ್
ಮಂಜನಾಡಿ: ಮೌಲನಾ ಆಜಾದ್ ಮಾದರಿ ಶಾಲೆ ಉದ್ಘಾಟನೆ

ಕೊಣಾಜೆ,ಆ.3: ರಾಜ್ಯದ ಸಿದ್ಧರಾಮಯ್ಯ ಸರಕಾರ ಅಲ್ಪಸಂಖ್ಯಾತ ಇಲಾಖೆಗೆ 2,200ಕೋಟಿ ರೂ. ಗಳನ್ನು ಮಂಜೂರು ಮಾಡಿದ್ದು ಎಲ್ಲ ಮೊತ್ತದ ಸದ್ಬಳಕೆ ಮಾಡಲು ಉತ್ತಮ ಅವಕಾಶವಿದ್ದು ಆ ನಿಟ್ಟಿನಲ್ಲಿ ಆ ಮೊತ್ತದಲ್ಲಿ ದ.ಕ. ಜಿಲ್ಲೆಯ ಮಂಗಳಾಂತಿ ಸೇರಿ ಜಿಲ್ಲೆಯಲ್ಲಿ ಒಟ್ಟು 4 ಕಡೆಗಳಲ್ಲಿ ಮೌಲಾನಾ ಮಾದರಿ ಶಾಲೆ ಮಂಜೂರಾತಿ ಸಾಧ್ಯವಾಯಿತು ಎಂದು ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದರು.
ಮಂಜನಾಡಿ ಗ್ರಾಮದ ಮಂಗಳಾಂತಿಯಲ್ಲಿ ಕರ್ನಾಟಕ ಸರಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ನೂತನವಾಗಿ ಆರಂಭಿಸಲಾದ ಮೌಲನಾ ಆಜಾದ್ ಮಾದರಿ ಶಾಲೆಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಒಂದು ಯೋಜನೆಯನ್ನು ಸರಕಾರ ಮಂಜೂರಾತಿ ಮಾಡುವಾಗ ಅದನ್ನು ತಮ್ಮ ಕ್ಷೇತ್ರಕ್ಕೆ ಒದಗಿಸಲು ಹಲವು ಮಂದಿ ಹಲವು ರೀತಿಯಲ್ಲಿ ಪ್ರಯತ್ನ ಪಡುತ್ತಾರೆ. ಮಂಗಳಾಂತಿಯಲ್ಲಿ ಆರಂಭಗೊಂಡ ನೂತನ ಶಾಲೆಯ ನಿರ್ಮಾಣದ ಹಿಂದೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಎಸ್. ಕರಿಂ ಅವರ ಶ್ರಮ ಶ್ಲಾಘನೀಯ ಎಂದ ನುಡಿದ ಅವರು ಅಲ್ಪಸಂಖ್ಯಾತ ಸಮುದಾಯದ ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಸಮುದಾಯ ವಿದ್ಯಾರ್ಥಿಗಳಿಗೆ 75ಶೇ. ಹಾಗೂ ಇತರ ವಿದ್ಯಾರ್ಥಿಗಳಿಗೆ 25% ಮೀಸಲಾತಿ ಇರುವುದರಿಂದ ಸರಕಾರದ ವ್ಯವಸ್ಥೆಗೆ ಅನುಗುಣವಾಗಿ ಈ ಶಾಲೆಯಲ್ಲಿ ಉಚಿತ ಶಿಕ್ಷಣ ಪಡೆಯಲು ಅವಕಾಶ ಇದೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮಂಜೂರಾತಿಗೆ ಶ್ರಮಿಸಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎನ್.ಎಸ್. ಕರೀಂ ಅವರನ್ನು ಅಭಿನಂದಿಸಲಾಯಿತು.
ಮಂಜನಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದ್ ಅಸೈ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಮಂಜನಾಡಿ ಮುದರ್ರಿಸ್ ಅಹಮ್ಮದ್ , ಮಾಜಿ ಅಧ್ಯಕ್ಷ ಇಸ್ಮಾಯೀಲ್ ದೊಡ್ಡಮನೆ, ಪಂಚಾಯತ್ ಉಪಾಧ್ಯಕ್ಷೆ ಮರಿಯಮ್ಮ, ಮಾಜಿ ಉಪಾಧ್ಯಕ್ಷೆ ಕುಂಞಿ ಬಾವ ಹಾಜಿ, ಮಂಜನಾಡಿ ಎಸ್‍ಡಿಎಂಸಿ ಅಧ್ಯಕ್ಷ ಅಬ್ದುಲ್ ಲತೀಫ್, ಮುಖ್ಯಶಿಕ್ಷಕ ಮುರುಗಯ್ಯ, ಮುಖ್ಯೋಪಾಧ್ಯಾಯಿನಿ ನೀನಾ ಕುಮಾರಿ, ಶಿಕ್ಷಕಿ ಪ್ರತೀಪ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಪಿ.ಎಂ ಮೊಯ್ದಿನ್ ಕುಂಞಿ, ಮಂಗಳೂರು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ರವೂಫ್, ಮಂಜನಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀಲ್ ಹಾಗೂ ಪಂಚಾಯತ್ ಸದಸ್ಯರುಗಳು ಉಪಸ್ಥಿತರಿದ್ದರು.
ಹಳೆಕೋಟೆ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಕೆ.ಎಂ.ಕೆ. ಮಂಜನಾಡಿ ಸ್ವಾಗತಿಸಿದರು. ಅಬ್ದುಲ್ ಖಾದರ್ ಕಾರ್ಯಕ್ರಮ ನಿರೂಪಿಸಿದರು. ಪ್ರಭಾರ ಪ್ರಾಂಶುಪಾಲ ಮಹಾಬಲೇಶ್ವರ್ ನಾಯಕ್ ವಂದಿಸಿದರು.







