ರೋಟರಿ ಕ್ಲಬ್‍ನಿಂದ ಶಾಲಾ ಮಕ್ಕಳಿಗೆ ಸಸಿಗಳ ವಿತರಣೆ
ಕೊಣಾಜೆ,ಆ.2: ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಪರಿಸರ ರಕ್ಷಣೆಯ ಬಗ್ಗೆ ಅರಿವನ್ನು ಮೂಡಿಸಿದ್ದಲ್ಲಿ ಪೃಕೃತಿಯು ಇನ್ನಷ್ಟು ಹಸಿರಾಗಿ ಕಂಗೊಳಿಸಲು ಸಾಧ್ಯವಿದೆ ಎಂದು ದೇರಳಕಟ್ಟೆ ರೋಟರಿ ಕ್ಲಬ್‍ನ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಅಭಿಪ್ರಾಯ ಪಟ್ಟರು.
ದೇರಳಕಟ್ಟೆ ರೋಟರಿ ಕ್ಲಬ್‍ನ ದಶಮಾನೋತ್ಸವದ ಪ್ರಯುಕ್ತ ಗೋಗ್ರೀನ್ ಯೋಜನೆಯಡಿ ನಡೆಯುತ್ತಿರುವ ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮದ ಅಂಗವಾಗಿ ದೇರಳಕಟ್ಟೆಯ ನೇತಾಜಿ ಸುಭಾಶ್ಚಂದ್ರ ಬೋಸ್ ಸಂಯುಕ್ತ ಪ್ರೌಢಶಾಲೆಯ ಮಕ್ಕಳಿಗೆ ಗುರುವಾರದಂದು ಸಸಿಗಳನ್ನು ವಿತರಿಸಿ ಅವರು ಮಾತನಾಡಿದರು. ದೇರಳಕಟ್ಟೆ ರೋಟರಿ ಕ್ಲಬ್ ದಶಮಾನೋತ್ಸವದ ಅಂಗವಾಗಿ ಸ್ವಚ್ಚಭಾರತ, ಗೋಗ್ರೀನ್,ಮತ್ತು ಸೋಲಾರ್ ಅಳವಡಿಕೆಯ ಮೂರು ಪ್ರಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗೋಗ್ರೀನ್ ಕಾರ್ಯಕ್ರಮದಡಿ ಸಾವಿರ ಗಿಡಗಳನ್ನು ನೆಡುವ ಪ್ರಕ್ರಿಯೆಯು ಚಾಲ್ತಿಯಲ್ಲಿದ್ದು ಮಕ್ಕಳಲ್ಲಿ ಗಿಡಗಳನ್ನು ನೆಡುವುದರ ಸುದುದ್ದೇಶದ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಲ್ಲಿ ಪ್ರತೀ ಮಕ್ಕಳಿಗೂ ಸಸಿಗಳನ್ನು ನೀಡುತ್ತಿದ್ದು ಇವತ್ತು ಕೊಟ್ಟ ಸಸಿಗಳನ್ನು ಮನೆಯಲ್ಲಿ ನೆಟ್ಟು ಚೆನ್ನಾಗಿ ಪೋಷಿಸಿದ ಮಕ್ಕಳಿಗೆ ಮುಂಬರುವ ವರುಷದಲ್ಲಿ ಬಹುಮಾನ ಕೊಟ್ಟು ಗೌರವಿಸಲಾಗುವುದೆಂದು ಹೇಳಿದರು.
ದೇರಳಕಟ್ಟೆ ರೋಟರಿಯ ಮಾಜಿ ಅಧ್ಯಕ್ಷ ರೊ.ಜಯಪ್ರಕಾಶ್, ವಿಕ್ರಮ್ ದತ್ತಾ, ಪಿ.ಡಿ.ಶೆಟ್ಟಿ, ನಿರ್ದೇಶಕರಾದ ಹರಿದಾಸ್ ಮಾಡೂರು, ರಮೇಶ್ ಪೆರಾಡಿ, ರೂಪಾ ಶೆಟ್ಟಿ, ರಾಜೀವಿ ಕೆಂಪು ಮಣ್ಣು, ರತೀಶ್ ಪೂಜಾರಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಇಸ್ಮಾಯಿಲ್, ಮುಖ್ಯೋಪಾಧ್ಯಾಯಿನಿ ಚಂಚಲಾಕ್ಷಿ, ದೈಹಿಕ ಶಿಕ್ಷಕರಾದ ವಿಷ್ಣು ಹೆಬ್ಬಾರ್ ಮೊದಲಾದವರು ಇದ್ದರು.





.jpg.jpg)

