ಭಾರತದ ರಾಷ್ಟ್ರಗೀತೆಯೊಂದಿಗೆ ಸ್ವಾತಂತ್ರ್ಯೋತ್ಸವಕ್ಕೆ ಶುಭ ಕೋರಿದ ಪಾಕ್ ಸರಕಾರದ ವೆಬ್ ಸೈಟ್!

ಹೊಸದಿಲ್ಲಿ, ಆ.3: ಪಾಕಿಸ್ತಾನ ಸರಕಾರದ ಅಧಿಕೃತ ವೆಬ್ ಸೈಟನ್ನು ಹ್ಯಾಕ್ ಮಾಡಿದ ಹ್ಯಾಕರ್ ಗಳು ಭಾರತದ ರಾಷ್ಟ್ರಗೀತೆಯನ್ನು ಪೋಸ್ಟ್ ಮಾಡಿ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವಕ್ಕೆ ಶುಭಾಶಯ ಕೋರಿದ ಘಟನೆ ನಡೆದಿದೆ. ಕೆಲ ಸಮಯದ ನಂತರ ವೆಬ್ ಸೈಟನ್ನು ಸರಿಪಡಿಸಲಾಗಿದೆ.
ಹಿನ್ನೆಲೆಯಲ್ಲಿ ಭಾರತದ ರಾಷ್ಟ್ರಗೀತೆಯೊಂದಿಗೆ ಸ್ವಾತಂತ್ರ್ಯೋತ್ಸವಕ್ಕೆ ಶುಭಾಶಯ ಕೋರುತ್ತಾ ವೆಬ್ ಸೈಟ್ ಓಪನ್ ಆಗಿದೆ. ಪಾಕಿಸ್ತಾನ ಸರಕಾರದ ವೆಬ್ ಸೈಟ್ ಹ್ಯಾಕ್ ಆಗುತ್ತಿರುವುದು ಇದು 2ನೆ ಬಾರಿಯಾಗಿದೆ. ಈ ಹಿಂದೆ ಸುಮಾರು 30 ಪಾಕಿಸ್ತಾನಿ ಸರಕಾರಿ ವೆಬ್ ಸೈಟ್ ಗಳು ಹ್ಯಾಕ್ ಆಗಿತ್ತು.
pakistan.gov.pk ಎಂಬ ವೆಬ್ ಸೈಟನ್ನು 'Ne0-h4ck3r' ಎಂಬ ಹೆಸರಿನ ಹ್ಯಾಕರ್ ಗಳು ಹ್ಯಾಕ್ ಮಾಡಿದ್ದು, ಅಶೋಕ ಚಕ್ರ ಹಾಗೂ ತ್ರಿವರ್ಣ ಧ್ವಜದ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಇದರೊಂದಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನೂ ಕೋರಿದ್ದಾರೆ.
Next Story





